​ಹುಬ್ಬಳ್ಳಿ ಬಿಗ್ ಟ್ವಿಸ್ಟ್: ಸುಜಾತಾ ಹಂಡಿ ಹೈಡ್ರಾಮಾ ವಿಡಿಯೋ ಬಯಲು; ತಾನೇ ಬಟ್ಟೆ ಬಿಚ್ಚಿ ಪೊಲೀಸರಿಗೆ ಎಸೆದ ಬಿಜೆಪಿ ಕಾರ್ಯಕರ್ತೆ!

Spread the love

ಹುಬ್ಬಳ್ಳಿ: ನಗರದ ಕೇಶ್ವಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಿ ಬಂಧನ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದ್ದು, ಪೊಲೀಸರ ಮೇಲೆ ಕೇಳಿಬಂದಿದ್ದ ಆರೋಪಗಳು ಸುಳ್ಳೆಂದು ಸಾಬೀತುಪಡಿಸುವ ವಿಡಿಯೋ ಸಾಕ್ಷ್ಯಗಳು ಈಗ ಲಭ್ಯವಾಗಿವೆ. ಪೊಲೀಸರು ಮಹಿಳೆಯೊಬ್ಬರ ಮೇಲೆ ಅಮಾನವೀಯವಾಗಿ ನಡೆದುಕೊಂಡಿದ್ದಾರೆ ಎಂದು ಬೊಬ್ಬೆ ಹೊಡೆಯುತ್ತಿದ್ದವರ ಬಾಯಿ ಮುಚ್ಚಿಸುವಂತೆ, ಸುಜಾತಾ ಹಂಡಿ ಪೊಲೀಸ್ ವಾಹನ ಹತ್ತುವಾಗ ತಾನೇ ಸ್ವತಃ ಬಟ್ಟೆಗಳನ್ನು ಬಿಚ್ಚಿ ಎಸೆಯುತ್ತಿರುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ. ಈ ಘಟನೆಯ ಕುರಿತು ಸ್ಪಷ್ಟನೆ ನೀಡಿರುವ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಅವರು, ಮಹಿಳೆಯನ್ನು ಬಂಧಿಸುವ ವೇಳೆಯಲ್ಲಿ ಪೊಲೀಸರು ಯಾರೂ ಕೂಡ ಆಕೆಯನ್ನು ವಿವಸ್ತ್ರಗೊಳಿಸಿಲ್ಲ, ಬದಲಾಗಿ ಕಾನೂನಿನಿಂದ ತಪ್ಪಿಸಿಕೊಳ್ಳಲು ಮಹಿಳೆಯೇ ಸ್ವತಃ ಬಟ್ಟೆ ಬಿಚ್ಚಿಕೊಂಡಿದ್ದಾಳೆ ಎಂದು ಸ್ಫೋಟಕ ಮಾಹಿತಿ ನೀಡಿದ್ದಾರೆ.

​ಬಂಧನದ ವೇಳೆ ನಡೆದ ಹೈಡ್ರಾಮಾದ ಬಗ್ಗೆ ಅರೆಸ್ಟ್ ಮಾಡಲು ಹೋದ ಮಹಿಳಾ ಪಿಎಸ್ಐ ಕಲಾವತಿ ಚಂದಾವರಕರ ಅವರು ಮಾಹಿತಿ ನೀಡಿ, ಸುಜಾತಾ ಹಂಡಿ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಲ್ಲದೆ, ತಾನೇ ಬಟ್ಟೆ ಬಿಚ್ಚಿಕೊಂಡು ರಂಪಾಟ ಮಾಡಿದ್ದಾಳೆ. ಅಷ್ಟೇ ಅಲ್ಲದೆ ತನ್ನ ಒಳಉಡುಪುಗಳನ್ನು ತೆಗೆದು ಪೊಲೀಸರ ಮೇಲೆಯೇ ಎಸೆದಿದ್ದಾಳೆ ಎಂದು ತಿಳಿಸಿದ್ದಾರೆ. ಪೊಲೀಸರು ಆಕೆಯ ದೇಹ ಮುಚ್ಚಲು ಎಷ್ಟೇ ಪ್ರಯತ್ನ ಪಟ್ಟರೂ ಸಹಕರಿಸದ ಆಕೆ, ತಾನು ಅಮಾಯಕಿ ಎಂದು ಬಿಂಬಿಸಿಕೊಳ್ಳಲು ಹಾಗೂ ಪೊಲೀಸರ ಮೇಲೆ ದೌರ್ಜನ್ಯದ ಆರೋಪ ಹೊರಿಸಲು ಈ ನೀಚ ತಂತ್ರ ರೂಪಿಸಿರುವುದು ಈಗ ಜಗಜ್ಜಾಹೀರಾಗಿದೆ. ಪೊಲೀಸರ ಕೇಸಿನಿಂದ ತಪ್ಪಿಸಿಕೊಳ್ಳಲು ಮಹಿಳೆ ಎನ್ನುವುದನ್ನು ಮರೆತು ಆಕೆ ನಡೆದುಕೊಂಡ ಈ ವರ್ತನೆಯನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುತ್ತಿರುವ ಪಕ್ಷಗಳ ಕ್ರಮ ಎಷ್ಟು ಸರಿ ಎಂದು ಈಗ ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

​ಸುಜಾತಾ ಹಂಡೆ ಅವರ ಹಿನ್ನೆಲೆಯನ್ನು ಕೆದಕಿದಾಗ ಆಕೆ ಮೋಸ್ಟ್ ಕ್ರಿಮಿನಲ್ ಬ್ಯಾಗ್ರೌಂಡ್ ಹೊಂದಿರುವ ಮಹಿಳೆ ಎಂಬ ವಿಷಯ ಬಯಲಾಗಿದೆ. ಈಕೆಯ ಮೇಲೆ ಈಗಾಗಲೇ ಕೊಲೆ ಯತ್ನ, ಗಾಂಜಾ ಮಾರಾಟ ಹಾಗೂ ಹನಿ ಟ್ರ್ಯಾಪ್ ಸೇರಿದಂತೆ ಒಂಬತ್ತಕ್ಕೂ ಹೆಚ್ಚು ಗಂಭೀರ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ. ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಈ ಹಿಂದೆಯೂ ಇಂತಹ ನಾಟಕವಾಡುತ್ತಿದ್ದ ಆಕೆ, ಈ ಬಾರಿ ನೇರವಾಗಿ ಪೊಲೀಸರನ್ನೇ ಇಕ್ಕಟ್ಟಿಗೆ ಸಿಲುಕಿಸಲು ಯತ್ನಿಸಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಸದ್ಯ ಲಭ್ಯವಿರುವ ವಿಡಿಯೋ ಸಾಕ್ಷ್ಯಗಳಿಂದಾಗಿ ಪೊಲೀಸರ ಮೇಲಿದ್ದ ಕಳಂಕ ದೂರವಾಗಿದ್ದು, ಪ್ರಕರಣವು ಸಂಪೂರ್ಣವಾಗಿ ಸುಜಾತಾ ಹಂಡಿ ವಿರುದ್ಧ ತಿರುಗಿದೆ.

Leave a Reply

Your email address will not be published. Required fields are marked *