ಕರ್ತವ್ಯ ಲೋಪ: ನವಲಗುಂದ ತಾ: ಕುಮಾರಕೋಪ್ಪ ಗ್ರಾಮ ಆಡಳಿತಾಧಿಕಾರಿ (ತಲಾಟಿ)ಅಮಾನತ್ತು

Spread the love

ಧಾರವಾಡ: ಕರ್ತವ್ಯ ನಿರ್ಲಕ್ಷ್ಯ ಮತ್ತು ಸರ್ಕಾರದ ಆದೇಶಗಳನ್ನು ಪಾಲಿಸದ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ಕುಮಾರಗೊಪ್ಪ ಗ್ರಾಮದ ಗ್ರಾಮ ಆಡಳಿತಾಧಿಕಾರಿ ಗಜೇಶ ದೇಸಾಯಿ ಅವರನ್ನು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಅಮಾನತ್ತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಆಧಾರ್ ಸೀಡಿಂಗ್ ಮತ್ತು ಪೌತಿ ಆಂದೋಲನದ ಪ್ರಗತಿ ಪರಿಶೀಲನೆಗಾಗಿ ಆಗಸ್ಟ್ ೨೮ರಂದು ನಡೆಸಿದ್ದ ಸಭೆಗೆ ಗಜೇಶ ದೇಸಾಯಿ ಅವರು ಯಾವುದೇ ಮಾಹಿತಿ ನೀಡದೆ ಅನಧಿಕೃತವಾಗಿ ಗೈರಾಗಿದ್ದರು. ಅವರ ಈ ಅನುಪಸ್ಥಿತಿಯಿಂದಾಗಿ ಇ-ಪೌತಿ ಕಾರ್ಯಕ್ರಮದ ಪ್ರಗತಿಗೆ ಹಿನ್ನಡೆಯಾಗಿತ್ತು ಎಂದು ಜಿಲ್ಲಾಧಿಕಾರಿಗಳು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ಆಡಳಿತಾಧಿಕಾರಿಯಾಗಿ ಗಜೇಶ ಅವರು ಇ-ಪೌತಿಗೆ ಸಂಬಂಧಿಸಿದ ೪೪ ಅರ್ಜಿಗಳನ್ನು ನಿಗದಿತ ಸಮಯಕ್ಕೆ ವಿಲೇವಾರಿ ಮಾಡಬೇಕಿತ್ತು. ಆದರೆ, ಅವರು ಈ ಅರ್ಜಿಗಳನ್ನು ವಿಲೇವಾರಿ ಮಾಡದೆ ವಿಳಂಬ ಮಾಡಿದ್ದರು. ಇದು ಸರ್ಕಾರಿ ನೌಕರರ ನಾಗರಿಕ ಸೇವಾ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಆದ್ದರಿಂದ, ಕರ್ತವ್ಯ ಲೋಪ ಎಸಗಿದ ಗಜೇಶ ದೇಸಾಯಿ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತ್ತುಪಡಿಸಲಾಗಿದೆ. ಜಿಲ್ಲಾಧಿಕಾರಿಗಳ ಈ ಕಠಿಣ ಕ್ರಮವು ಆಡಳಿತದಲ್ಲಿ ಶಿಸ್ತು ಕಾಪಾಡುವ ಸಂಕಲ್ಪವನ್ನು ಬಿಂಬಿಸಿದೆ.

Leave a Reply

Your email address will not be published. Required fields are marked *