ಸರ್ಕಾರಿ ಆದೇಶಕ್ಕ ಇಲ್ಲಾ ಕಿಮ್ಮತ್ತು ಕುಂದಗೋಳ ಪಟ್ಟಣದ ಖಾಸಗಿ ಜಮೀನಿನಲ್ಲಿ ಕಸ ವಿಲೆವಾರಿ

Spread the love

ಧಾರವಾಡ: ಕುಂದಗೋಳ ಪಟ್ಟಣದ ಕಡಪಟ್ಟಿ ರಸ್ತೆಯಲ್ಲಿ ನಿರ್ಮಿಸಲಾದ ಘನತ್ಯಾಜ್ಯ ನಿರ್ವಹಣಾ ಘಟಕವು ಇಂದು ಕೇವಲ ಒಂದು ಸ್ಮಾರಕವಾಗಿ ಉಳಿದಿದೆ. ಸ್ವಚ್ಛ ಭಾರತ ಮಿಷನ್ ಎಮ್ ಆರ್ ಎಪ್ 32 ಲಕ್ಷ ಅನೂದಾನ ಹಾಗೂ ಎಪ್ ಎಸ್ ಡಿ ಪಿ 1 ಕೋಟಿ 32 ಲಕ್ಷ ಅನೂದಾನ ಹೀಗೆ ಒಟ್ಟು ಅಂದಾಜು 1 ಕೋಟಿ 62 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣವಾದ ಈ ಎರಡು ಘಟಗಳು ಹಸಿ ಮತ್ತು ಒಣ ಕಸವನ್ನು ವಿಂಗಡಿಸಿ ಗೊಬ್ಬರ ತಯಾರಿಸುವ ಮಹತ್ವದ ಉದ್ದೇಶ ಹೊಂದಿತ್ತು. ಆದರೆ, ದುರಂತವೆಂದರೆ, ಈ ಉದ್ದೇಶ ಸಂಪೂರ್ಣವಾಗಿ ವಿಫಲವಾದಂತೆ ಬಾಸವಾಗುತ್ತಿದೆ.
ಈ ಯೋಜನೆಗೆ ಕುಂದಗೋಳ ಮತಕ್ಷೇತ್ರದ ಶಾಸಕರು ವಿಷೇಶ ಕಾಳಜಿ ವಹಿಸಿ ಕೇಂದ್ರದಿಂದ ಇಷ್ಟು ಕೋಟಿ ರೂಪಾಯಿ ಹೆಚ್ಚುವರಿ ಅನುದಾನ ತಂದರೂ, ಅದು ಪ್ರಯೋಜನಕ್ಕೆ ಬಾರದೆ ಹೋಗಿದೆ. ಎಂಬ ಕೂಗು ಸಾರ್ವಜನಿಕ ವಲಯಗಳಲ್ಲಿ ಕೆಳಿ ಬರುತ್ತಿದೆ‌.
ಅಧಿಕಾರಿಗಳ ಅಕ್ಷಮ್ಯ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಯಿಂದಾಗಿ ಘಟಕದ ಲ್ಲಿ ಹೋಗುವ ಕಸವು ಯಾವುದೋ ಖಾಸಗಿ ಜಮೀನಿನಲ್ಲಿ ಬಿಳುತ್ತಿದೆ.
ಈ ವ್ಯವಸ್ಥೆಯ ವೈಫಲ್ಯದ ಪರಿಣಾಮವಾಗಿ, ಪಟ್ಟಣ ಪಂಚಾಯತಿಯವರು ಕಸವನ್ನು ಸರಿಯಾಗಿ ವಿಲೇವಾರಿ ಮಾಡದೆ, ಕುಂದಗೋಳ-ಶಿರೂರ ರಸ್ತೆಯ ಬದಿ ಹಾಗೂ ಖಾಸಗಿ ಜಮೀನಿನಲ್ಲಿ ರಾಶಿ ರಾಶಿ ಹಾಕುತ್ತಿದ್ದಾರೆ. ರಸ್ತೆಯುದ್ದಕ್ಕೂ ಬಿದ್ದಿರುವ ಕೊಳೆಯುತ್ತಿರುವ ಕಸದ ರಾಶಿಗಳು ತೀವ್ರ ದುರ್ವಾಸನೆಯನ್ನು ಹರಡುತ್ತಿದ್ದು, ಆ ದಾರಿಯಲ್ಲಿ ಹೋಗುವವರಿಗೆ ನರಕ ಯಾತನೆ ಉಂಟಾಗಿದೆ. ಜನರು ಮೂಗು ಮುಚ್ಚಿಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದು ಸಾರ್ವಜನಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ. ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯೂ ಎದುರಾಗಿದೆ.
ಇಂತಹ ಘೋರ ನಿರ್ಲಕ್ಷ್ಯದ ಬಗ್ಗೆ ಪಂಚಾಯತ್ ರಾಜ್ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳಂತಹ ಉನ್ನತ ಮಟ್ಟದ ಅಧಿಕಾರಿಗಳು ಮೌನವಾಗಿರುವುದು ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಮಸ್ಯೆಯನ್ನು ಸ್ಥಳದಲ್ಲೇ ಪರಿಶೀಲಿಸಿದರೆ ವಾಸ್ತವಾಂಶ ತಿಳಿಯುತ್ತದೆ. ಸ್ವಚ್ಛ ಭಾರತ ಅಭಿಯಾನದಂತಹ ಯೋಜನೆಗಳು ಕುಂದಗೋಳದಲ್ಲಿ ಕೇವಲ ಘೋಷಣೆಗಳಾಗಿ ಉಳಿದಿವೆ. ಈ ನಿರ್ಲಕ್ಷ್ಯದ ಬಗ್ಗೆ ತಕ್ಷಣವೇ ಉನ್ನತ ಮಟ್ಟದ ತನಿಖೆ ನಡೆಸಿ, ಕೋಟಿಗಟ್ಟಲೆ ಹಣ ವ್ಯಯಿಸಿ ನಿರ್ಮಿಸಿದ ಘಟಕವನ್ನು ಸರಿಯಾಗಿ ಉಪಯೋಗಿಸಿಕೊಳ್ಳದೇ ಇರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ. ಇಲ್ಲವಾದರೆ, ಕುಂದಗೋಳದ ನಾಗರಿಕರು ತಮ್ಮ ಆರೋಗ್ಯಕರ ಪರಿಸರದ ಹಕ್ಕಿಗಾಗಿ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗಲಿದೆ.

  ಪ್ರಜಾಪ್ರಭುತ್ವದ ಆಡಳಿತದಲ್ಲಿ ಇಂತಹ ಭ್ರಷ್ಟಾಚಾರ ಮತ್ತು ನಿರ್ಲಕ್ಷ್ಯಕ್ಕೆ ಅವಕಾಶ ನೀಡಿದರೆ, ಅದರ ಪರಿಣಾಮಗಳು ಗಂಭೀರವಾಗಿರುತ್ತವೆ. ಈ ವಿಚಾರದಲ್ಲಿ ಮುಂದಿನ ಬೆಳವಣಿಗೆಗಳು ಹೇಗೆ ಇರುತ್ತವೆ ಎಂಬುದನ್ನು ಕಾದು ನೋಡಬೇಕಿದೆ.

ಕೋಟ: 01 ಪ ಪಂ ಮುಖ್ಯಾಧಿಕಾರಿ ಸಿ ವಿ ಕುಲಕರ್ಣಿ
ಶಿರೂರ-ಕುಂದಗೋಳ ರಸ್ತೆಯ ಪಕ್ಕದಲ್ಲಿನ ಜಮೀನಿನಲ್ಲಿ ಹಗೆ ಆಕಾರದ ಗುಂಡಿಗಳು ಬಿದ್ದಿದ್ದರಿಂದ ಆ ಕಸವನ್ನು ಅಲ್ಲಿಗೆ ಹಾಕಲಾಗಿತ್ತು. ಅದು ರಸ್ತೆಯಲ್ಲಿ ಕೂಡ ಬಿದ್ದಿರುವದರಿಂದ ಅದನ್ನ ಜೆಸಿಬಿ ಮೂಲಕ ತೆಗೆಸಿ ಒಳಗೆ ಹಾಕಿಸಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ಕ್ರಮ ವಹಿಸುತ್ತೇನೆ ಎಂದು ಹೇಳಿದರು.

ಕೋಟ: 02 ಜಾನಕಿ ಬಳ್ಳಾರಿ ಆರೋಗ್ಯ ನೀರಿಕ್ಷರು ಪ ಪಂ ಕುಂದಗೋಳ
ಈಗಾಗಲೇ ಪಟ್ಟಣದಲ್ಲಿ ಕಸವನ್ನು ಪ್ರತ್ಯೇಕ ಜಾಗದಲ್ಲಿ ಹಾಕದೆ ಎಸ್ ಡಬ್ಲ್ಯೂ ಎಮ್ ಘಟಕಕ್ಕೆ ಹಾಕುತ್ತಿದ್ದೇವೆ. ಮುಂದೆ ಯಾರಾದರೂ ಈ ತರ ಕಸವನ್ನು ಪ್ರತ್ಯೇಕವಾಗಿ ಹಾಕಿದರೆ ಅವರ ಮೇಲೆ ಕಠಿಣ ಕ್ರಮ ಜರಿಗಿಸುತ್ತೇನೆ ಎಂದು ಹೇಳಿದರು.

ಪೋಟೋ : 01
ಪಟ್ಟಣದ ಶಿರೂರ- ಕುಂದಗೋಳ ರಸ್ತೆ ಮಾರ್ಗದ ಖಾಸಗಿ ಜಮೀನಿನಲ್ಲಿ ಹಾಗೂ ರಸ್ತೆಯಲ್ಲಿ ಕಸ ಹಾಕಿರುವದು.

ಪೋಟೋ; 01 A
ಪಟ್ಟಣದ ಸ್ವಚ್ಚ ಭಾರತ ಮಿಶನ್ ಯೋಜನೆಯಡಿ ಕೋಟಿ ಗಟ್ಟಲೆ ಹಣ ವ್ಯಹಿಸಿ ನಿರ್ಮಾಣ ಮಾಗಿರುವ ಎಸ್ ಡಬ್ಲ್ಯೂ ಎಮ್ ಪ್ಲಾಟಗಳು.

Leave a Reply

Your email address will not be published. Required fields are marked *