
ನವಲಗುಂದ : ಪಟ್ಟಣದ ತಾಲ್ಲೂಕ ಸರ್ಕಾರಿ ಆಸ್ಪತ್ರೆಯಲ್ಲಿ
ಮಾಜಿ ಶಾಸಕರು, ಹಿರಿಯ ಸಹಕಾರಿ ಧುರಿಣರಾದ ದಿ. ಶಂಕರಗೌಡರು ವಿ. ಪಾಟೀಲ, ದಿ. ಶ್ರೀಮತಿ ಲಕ್ಷ್ಮೀಬಾಯಿ ಶಂಕರಗೌಡರು ಪಾಟೀಲ ಮತ್ತು ದಿ. ದೇಸಾಯಿಗೌಡರ ಶಂಕರಗೌಡ ಪಾಟೀಲ ಅವರುಗಳ 34 ನೇ ಪುಣ್ಯಸ್ಮರಣೆಯ ಅಂಗವಾಗಿ ಹಮ್ಮಿಕೊಂಡದ್ದ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರವನ್ನು ಕೆ ಸಿ ಸಿ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಬಾಪೂಗೌಡ ಡಿ ಪಾಟೀಲ್ ಅವರು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ‘ಇತ್ತೀಚಿನ ದಿನಗಳಲ್ಲಿ ಕಣ್ಣಿನ ಸಮಸ್ಯೆ ಗಂಭೀರ ಸ್ವರೂಪದ ಕಾಯಿಲೆಯಾಗಿ ಪರಿಣಮಿಸುತ್ತಿದೆ. ಆರಂಭದಲ್ಲೇ ತಪಾಸಣೆ ಮಾಡಿಸಿ, ಸಮಸ್ಯೆ ಕಂಡರೆ ಚಿಕಿತ್ಸೆ ಪಡೆಯಬೇಕು’ ಎಂದು ಸಲಹೆ ನೀಡಿದರು.
‘ಕಣ್ಣಿನ ತಪಾಸಣೆ ನಡೆಸಿ, ಅಗತ್ಯವಿದ್ದವರಿಗೆ ಉಚಿತವಾಗಿ ಕನ್ನಡಕ ವಿತರಿಸುವುದರ ಜೊತೆಗೆ ಕಣ್ಣಿನ ಶಸ್ತ್ರಚಿಕಿತ್ಸೆಗೆ ನೆರವಾಗುವ ಉದ್ದೇಶದಿಂದ ಈ ಶಿಬಿರವನ್ನು ಆಯೋಜಿಸಲಾಗಿದೆ’ ಎಂದು ತಿಳಿಸಿದರು.
ಶಿಬಿರದಲ್ಲಿ ಒಟ್ಟು (200) ಜನರಿಗೆ ರಕ್ತದೊತ್ತಡ, ಮಧುಮೇಹ ಹಾಗೂ ಕಣ್ಣಿನ ತಪಾಸಣೆ ನಡೆಸಲಾಯಿತು. ಇದರಲ್ಲಿ(25) ಮಂದಿಗೆ ಉಚಿತವಾಗಿ ಕನ್ನಡಕ ವಿತರಿಸಲಾಯಿತು. ಉಚಿತ ಔಷಧ ವಿತರಣೆಯ ಜೊತೆಗೆ ಕಣ್ಣಿನಪೊರೆ ಶಸ್ತ್ರಚಿಕಿತ್ಸೆ ಅವಶ್ಯಕತೆಯಿದ್ದ (58)ಮಂದಿಯನ್ನು ಗುರುತಿಸಿ, ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಯಿತು.
ಈ ಸಂದರ್ಭದಲ್ಲಿ, ಶಾಸಕ ಎನ್ ಎಚ್ ಕೋನರಡ್ಡಿ, ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷರು ಗುರುಪ್ರಸಾದ್ ಪಾಟೀಲ್, ಸದುಗೌಡ ಪಾಟೀಲ್, ನಾಗನಗೌಡ ಪಾಟೀಲ್, ರಾಯನಗೌಡ ಪಾಟೀಲ್, ವೈದ್ಯಾಧಿಕಾರಿಗಳಾದ ಎನ್ ಬಿ ಕರ್ಲವಾಡ, ಡಾ ರೂಪಾ ಕಿಣಗಿ, ಎಲ್ ಎಮ್ ನೀಡವಣಿ, ಪಿ ಕೆ ಪಾಟೀಲ್, ಆರ್ ಬಿ ಮಣಕವಾಡ, ಎಮ್ ಬಿ ಹಿರೇಗೌಡ, ಹಾಗೂ, ಹುಬ್ಬಳ್ಳಿ ಲೈನ್ಸ್ ಕ್ಲಬ್ ವೈಧ್ಯರು ಮತ್ತು ಶಲವಡಿ ಗ್ರಾಮದ ಹಿರಿಯರು, ಪಿಎಲ್ ಡಿ ಬ್ಯಾಂಕ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

