
ಕುಂದಗೋಳ: ಅತಿಯಾದ ಮಳೆ ಮತ್ತು ಸಾಲಬಾಧೆ ತಾಳಲಾರದೆ ತಾಲೂಕಿನ ತರ್ಲಘಟ್ಟ ಗ್ರಾಮದ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ನಡೆದಿದೆ. ಮೃತರನ್ನು ರುದ್ರಗೌಡ ಹುತ್ತನಗೌಡ ರಾಮನಗೌಡ್ರ (50) ಎಂದು ಗುರುತಿಸಲಾಗಿದೆ.
ಮೃತ ರೈತರು ತರ್ಲಘಟ್ಟ ಗ್ರಾಮದ ಬಸ್ ನಿಲ್ದಾಣದ ಬಳಿ ಇರುವ ಕೆರೆಗೆ ಮುಳುಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಈ ಗ್ರಾಮದಲ್ಲಿ ಜರುಗಿದೆ.
ಜಮೀನಿನಲ್ಲಿ ಬೆಳೆದಿದ್ದ ಬೆಳೆ ನಾಶ
ರುದ್ರಗೌಡ ರಾಮನಗೌಡ್ರ (50) ಅವರು ಹೊಂದಿದ್ದು, ಈ ವರ್ಷ ಅತೀವೃಷ್ಟಿ ಮಳೆಯಿಂದಾಗಿ ಗೋವಿನ ಜೋಳದ ಬೆಳೆ ಸಂಪೂರ್ಣವಾಗಿ ನಾಶವಾಗಿತ್ತು. ಇದರಿಂದಾಗಿ ಬೆಳೆ ನಷ್ಟ ಉಂಟಾಗಿರುವುದು ರೈತನಿಗೆ ಆರ್ಥಿಕ ಸಂಕಷ್ಟ ತಂದಿತ್ತು.
ಅಂದಾಜು 8 ಲಕ್ಷ ರೂ. ಸಾಲ
ಕೆವಿಜಿ ಮತ್ತು ಸಹಕಾರಿ ಬ್ಯಾಂಕ್‌ಗಳಲ್ಲಿ ಅಂದಾಜು 8 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದ ರುದ್ರಗೌಡರು, ಬೆಳೆ ನಷ್ಟದಿಂದಾಗಿ ಸಾಲ ತೀರಿಸಲು ಸಾಧ್ಯವಾಗದೇ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿದ್ದಾರೆ. ಇದರಿಂದ ಮನನೊಂದು ಈ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಪೊಲೀಸರಿಂದ ತನಿಖೆ
ಘಟನಾ ಸ್ಥಳಕ್ಕೆ ಗುಡಗೇರಿ ಪೊಲೀಸ್ ಠಾಣೆಯ ಪಿಎಸ್‌ಐ ಪ್ರವೀಣ ನೆಸರಗಿ ಹಾಗೂ ಅವರ ತಂಡ ಭೇಟಿ ನೀಡಿ ತನಿಕೆ ನಡಿಸಿದ್ದಾರೆ.

