
ಧಾರವಾಡ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿ, ಧಾರವಾಡ ಮತ್ತು ಹುಬ್ಬಳ್ಳಿ-ಧಾರವಾಡ ನಾಗರಿಕ ಪರಿಸರ ಸಮಿತಿ, ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ “ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣಮಹೋತ್ಸವ” ಅಂಗವಾಗಿ ‘ಪರಿಸರ ಜಾಗೃತಿ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮವು ಸೆಪ್ಟೆಂಬರ್ 23,ರ ಮಂಗಳವಾರ ಮಧ್ಯಾಹ್ನ 2:30 ಗಂಟೆಗೆ ಸಂಶಿಯ ಕೆಎಲ್‌ಇ ಕಾಲೇಜು ಆವರಣದಲ್ಲಿ ನಡೆಯಲಿದೆ.
ಕಾರ್ಯಕ್ರಮದ ವಿವರಗಳು:
- ಉದ್ಘಾಟನೆ: ಗೋಪಾಲಕೃಷ್ಣ ಸಣ್ಣತಂಗಿ, ವಲಯ ಪರಿಸರ ಅಧಿಕಾರಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಧಾರವಾಡ.
- ಮುಖ್ಯ ಅತಿಥಿಗಳು: ಐ.ಹೆಚ್. ಜಗದೀಶ್, ಪರಿಸರ ಅಧಿಕಾರಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಧಾರವಾಡ, ಮತ್ತು ಶಂಕರ ಕುಂಬಿ, ಅಧ್ಯಕ್ಷರು, ಹುಬ್ಬಳ್ಳಿ-ಧಾರವಾಡ ನಾಗರಿಕ ಪರಿಸರ ಸಮಿತಿ, ಧಾರವಾಡ.
- ಅಧ್ಯಕ್ಷತೆ: ಎ.ಬಿ. ಉಪ್ಪಿನ, ಅಧ್ಯಕ್ಷರು, ಕೆಎಲ್‌ಇ ಕಾಲೇಜು, ಸಂಶಿ.
ಈ ಕಾರ್ಯಕ್ರಮದಲ್ಲಿ ಪರಿಸರ ಜಾಗೃತಿಯ ಕುರಿತು ಉಪನ್ಯಾಸ ಮತ್ತು ವಿಚಾರ ವಿನಿಮಯ ನಡೆಯಲಿದ್ದು, ಎಲ್ಲರೂ ಭಾಗವಹಿಸಿ ಸಹಕರಿಸಬೇಕೆಂದು ಆಯೋಜಕರು ಕೋರಿದ್ದಾರೆ.

