ರಾಮಸಮುದ್ರದ ತಂಬೂರಿ ಜನಪದ ಕಲಾವಿದ ಕಾಳಪ್ಪ.ಎನ್. ಅವರಿಗೆ ‘ಕರುನಾಡ ರತ್ನ’ ಪ್ರಶಸ್ತಿಗೆ ಆಯ್ಕೆ
ಚಾಮರಾಜನಗರ: ರಾಮಸಮುದ್ರದ ತಂಬೂರಿ ಜನಪದ ಕಲಾವಿದ ಕಾಳಪ್ಪ.ಎನ್. ಅವರಿಗೆ ಕನ್ನಡ ರಾಜ್ಯೋತ್ಸವದ ಅಂಗವಾಗಿ ಬೆಂಗಳೂರಿನ ಕರ್ನಾಟಕ ಮೀಡಿಯಾ ಕ್ಲಬ್ ವತಿಯಿಂದ 2026ನೇ ಸಾಲಿನ ‘ಕರುನಾಡ ರತ್ನ’ ಪ್ರಶಸ್ತಿ ನೀಡಿ ಗೌರವಿಸಲು ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ರಾಮೇಶ್.ಎಸ್.ಜಿ. ತಿಳಿಸಿದ್ದಾರೆ.
ಕಾಳಪ್ಪ ಅವರು ಜನಪದ ಪದಗಳನ್ನು ಹಾಡುವ ಮೂಲಕ ಜನಪದ ಕಲೆಯ ಉಳಿವು ಮತ್ತು ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಮಹದೇಶ್ವರ, ಮಂಟೇಸ್ವಾಮಿ ಸೇರಿದಂತೆ ಹಲವು ಜನಪದ ಹಾಡುಗಳನ್ನು ವಿವಿಧ ಕಾರ್ಯಕ್ರಮಗಳಲ್ಲಿ ಹಾಡಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಚಾಮರಾಜನಗರ ಜಿಲ್ಲೆಯ ಜನಪದ ಕಲಾವಿದರಾಗಿರುವ ಕಾಳಪ್ಪ ಅವರ ಕಲಾಸೇವೆಯನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
2026ರ ನವೆಂಬರ್ 29ರಂದು ಸಂಜೆ 4 ಗಂಟೆಗೆ ಬೆಂಗಳೂರಿನ ಟೌನ್ಹಾಲ್ನ ಸರ್.ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಕಾಳಪ್ಪ ಅವರಿಗೆ ‘ಕರುನಾಡ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ರಾಮೇಶ್.ಎಸ್.ಜಿ. ತಿಳಿಸಿದ್ದಾರೆ.