ಕುಂದಗೋಳದಲ್ಲಿ ಕರವೇ (ನಾರಾಯಣಗೌಡ್ರ) ಬಣದ ವತಿಯಿಂದ ಬೆಳೆ ವಿಮೆ ಮತ್ತು ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ ನಂತರ ಶಿರಸ್ತೆದಾರಗೆ ಮನವಿ

Spread the love

ಕುಂದಗೋಳ: ತಾಲೂಕಿನಲ್ಲಿ ಅತಿವೃಷ್ಟಿಯಿಂದ ಸಂಪೂರ್ಣ ಬೆಳೆ ನಾಶವಾಗಿರುವ ಹಿನ್ನೆಲೆಯಲ್ಲಿ, ಪ್ರತಿ ಹೆಕ್ಟೇರ್‌ಗೆ 50 ಸಾವಿರ ರೂಪಾಯಿ ಪರಿಹಾರ ನೀಡಬೇಕು ಮತ್ತು ಬೆಳೆ ವಿಮೆ ತಾರತಮ್ಯವನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಕಾರ್ಯಕರ್ತರು ಗುರುವಾರದಂದು ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಬಳಿಕ ಶಿರಸ್ತೆದಾರ ಮಹೇಶ ಶ್ಯಾನಬಾಳ ಅವರಿಗೆ ಮನವಿ ಸಲ್ಲಿಸಿದರು.

ಪ್ರಮುಖ ಬೇಡಿಕೆಗಳು:

  • ಬೆಳೆ ನಾಶಕ್ಕೆ ಪರಿಹಾರ: ಅತಿವೃಷ್ಟಿಯಿಂದಾಗಿ ಹೆಸರು, ಶೇಂಗಾ, ಹತ್ತಿ, ಉದ್ದು, ಸೋಯಾಬೀನ್ ಮತ್ತು ಜೋಳದ ಬೆಳೆಗಳು ಸಂಪೂರ್ಣ ನಾಶವಾಗಿದ್ದು, ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರ ತಕ್ಷಣವೇ ಪ್ರತಿ ಹೆಕ್ಟೇರ್‌ಗೆ ₹50,000 ಪರಿಹಾರ ನೀಡಬೇಕು.
  • ಬೆಳೆ ವಿಮೆ ತಾರತಮ್ಯ: ತಾಲೂಕಿನ ಕುಂದಗೋಳ ಹೋಬಳಿ ರೈತರಿಗೆ ಬೆಳೆ ವಿಮೆ ಪಾವತಿಯಾಗಿದ್ದು, ಸಂಶಿ ಹೋಬಳಿ ರೈತರಿಗೆ ವಿಮೆ ಸಂದಾಯವಾಗಿಲ್ಲ. ಈ ತಾರತಮ್ಯವನ್ನು ನಿಲ್ಲಿಸಿ, ತಕ್ಷಣವೇ ಸಂಶಿ ಹೋಬಳಿ ರೈತರಿಗೂ ಬೆಳೆ ವಿಮೆ ಬಿಡುಗಡೆ ಮಾಡಿಸಬೇಕು.
  • ಸಾಲ ಮರುಪಾವತಿ ನೋಟಿಸ್ ನಿಲ್ಲಿಸಿ: ಬೆಳೆ ನಷ್ಟದಿಂದ ಸಂಕಷ್ಟದಲ್ಲಿರುವ ರೈತರಿಗೆ ಬ್ಯಾಂಕ್‌ಗಳು ಬೆಳೆ ಸಾಲ ಮರುಪಾವತಿಗೆ ನೋಟಿಸ್ ನೀಡಿ ಕಿರುಕುಳ ನೀಡುವುದನ್ನು ತಕ್ಷಣ ನಿಲ್ಲಿಸಬೇಕು. ಎಂದರು

ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಕರ್ನಾಟಕ ರಕ್ಷಣಾ ವೇದಿಕೆ ಎಚ್ಚರಿಕೆ ನೀಡಿದೆ.

ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾ ಅಧ್ಯಕ್ಷ ಕಲ್ಲಪ್ಪ ಹರಕುಣಿ, ರವಿ ಶಿರಸಂಗಿ, ಅಡಿವೆಪ್ಪ ಹೆಬಸೂರ, ಮಂಜುನಾಥ ಹಾದಿಮನಿ, ಅಶೋಕ್ ಸಂಶಿ, ಲಿಂಗರಾಜ್ ಕುಬಿಹಾಳ, ಮಂಜುನಾಥ ಪೂಜಾರ, ಮಂಜುನಾಥ್ ಕಟ್ಟಿ, ಬಸವರಾಜ ಮುಳ್ಳೋಳಿ, ಮಂಜುನಾಥ್ ಮೇಲ್ಮಳಗಿ, ಖಲಂದರ್ ಹಂಚಿನಾಳ ಹಾಗೂ ಇತರ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *