
ಕುಂದಗೋಳ : ಪಟ್ಟಣದ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ನಿಮಿತ್ಯ ಅನ್ನ ಪ್ರಸಾದ ಸೇವೆಯನ್ನು ಭಕ್ತರಿಗೆ ನೀಡುವ ಮೂಲಕ ಶಿವಾನಂದ ಮಠದ ಶಿವಾನಂದ ಮಹಾಸ್ವಾಮಿಗಳು ಹಾಗೂ ಶಾಸಕ ಎಮ್ ಆರ್ ಪಾಟೀಲ್.ಜಂಟಿಯಾಗಿ ಚಾಲನೆ ನೀಡಿದರು.
ನಂತರ ಶಾಸಕ ಎಂ ಆರ್ ಪಾಟೀಲ ಮಾತನಾಡಿ ಪಟ್ಟಣದ ಇತಿಹಾಸ ಪ್ರಸಿದ್ಧ ದೇವಸ್ಥಾನ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಪ್ರತಿ ವರ್ಷ ಶ್ರಾವಣ ಮಾಸದ ನಿಮಿತ್ಯವಾಗಿ ವಿಶೇಷ ಪೂಜೆ ಅಲಂಕಾರ ಭಜನೆ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದಾರೆ, ನಾಡಿನ ಒಳ್ಳೆಯದಾಗಲಿ ವಿಶೇಷ ಪೂಜಾ ಪುನಸ್ಕಾರಗಳನ್ನು ಹೋಮ ಹವನಗಳನ್ನು ಮಾಡಲಾಗುತ್ತದೆ ಅಲ್ಲದೆ ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆಯನ್ನು ಪ್ರತಿ ವರ್ಷವೂ ಮಾಡಿಕೊಂಡು ಬರಲಾಗುತ್ತಿದೆ ಈ ವರ್ಷವೂ ಸಹ ಶ್ರಾವಣ ಮಾಸದ ನಿಮಿತ್ಯವಾಗಿ ಅನ್ನ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿದೆ ಭಕ್ತರಿಗೆ ನೀಡುವ ಸೌಭಾಗ್ಯವನ್ನು ಕಲ್ಪಿಸಿದ ದೇವಸ್ಥಾನದ ಮಂಡಳಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು ಬಂದ ಭಕ್ತರಿಗೆ ಅನ್ನಪ್ರಸಾದವನ್ನು ಶಾಸಕರು ತಮ್ಮ ಕೈಯಾರೆ ನೀಡುವ ಮೂಲಕ ಭಕ್ತಿ ಭಾವ ಮೆರೆದರು,
ಈ ಸಂದರ್ಭದಲ್ಲಿ ಬಿ ಟಿ ಗಂಗಾಯಿ .ಬಸವರಾಜ್ ಕೊಪ್ಪದ .ಈಶ್ವರಪ್ಪ ಗಂಗಾಯಿ. ವಾಗೇಶ್ ಗಂಗಾಗಿ, ಟಾಕಣ್ಣ ಬಂಡಿವಾಡ. ಉಮೇಶ್ ಬಿಡ್ನಾಳ ಹಾಗೂ ದೇವಸ್ಥಾನದ ಕಮಿಟಿಯ ಆಡಳಿತ ಮಂಡಳಿಯವರು ಹಾಗೂ ಭಕ್ತರು ಉಪಸ್ಥಿತರಿದ್ದರು
ಪೋಟೋ:
ಪಟ್ಟಣದ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ನಿಮಿತ್ಯ ಅನ್ನ ಪ್ರಸಾದ ಸೇವೆಯನ್ನು ಭಕ್ತರಿಗೆ ನೀಡುವ ಶಾಸಕ ಎಮ್ ಆರ್ ಪಾಟೀಲ್. ಚಾಲನೆ ನೀಡಿದರು.

