
ಕುಂದಗೋಳ: ವಿದ್ಯಾರ್ಥಿಗಳು ಉತ್ತಮ ಗುಣಮಟ್ಟದ ಶಿಕ್ಷಣ ಪಡೆಯಬೇಕಾದರೆ ಪಾಲಕರು ತಮ್ಮ ಮಕ್ಕಳ ಮೊಬೈಲ್ ಗೀಳನ್ನು ತಪ್ಪಿಸುವುದು ಅತ್ಯಗತ್ಯ ಎಂದು ಜಿ.ಕೆ. ಹಿರೇಗೌಡರ ಪ್ರೌಢಶಾಲಾ ಸಮಿತಿಯ ಕಾರ್ಯದರ್ಶಿ ಶ್ರೀಮತಿ ಎಲ್.ಡಿ. ಕಲಿದ್ಯಾಮನಗೌಡ್ರ ಹೇಳಿದರು.
ಅವರು ಪಟ್ಟಣದ ರೊಟ್ಟಿಗವಾಡ ಗ್ರಾಮದ ಜಿ.ಕೆ. ಹಿರೇಗೌಡರ ಪ್ರೌಢಶಾಲೆಯಲ್ಲಿ ನಡೆದ 79ನೇ ಸ್ವಾತಂತ್ರ್ಯೋತ್ಸವ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಪಾಲಕರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿ. “ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬಳಕೆ ಒಂದು ಅಂಟುರೋಗವಾಗಿದ್ದು, ಅದರಿಂದ ದೂರವಿರುವುದು ಮಕ್ಕಳ ಉತ್ತಮ ಭವಿಷ್ಯಕ್ಕೆ ನಿರ್ಣಾಯಕವಾಗಿದೆ” ಎಂದು ಅವರು ಅಭಿಪ್ರಾಯಪಟ್ಟರು.
ನಂತರ ಇನ್ನೋರ್ವ ಮುಖ್ಯ ಶಿಕ್ಷಕ ವಿ ಎಸ್ ಕಬನೂರ ಮಾತನಾಡಿ ಶಿಕ್ಷಣವು ಪಾಲಕ, ಬಾಲಕ ಮತ್ತು ಶಿಕ್ಷಕ ಎಂಬ ಮೂರು ಆಯಾಮಗಳನ್ನು ಹೊಂದಿದ್ದು, ಇವರೆಲ್ಲರೂ ಒಟ್ಟಾಗಿ ಶ್ರಮಿಸಿದಾಗ ಮಾತ್ರ ಕಲಿಕೆ ಅರ್ಥಪೂರ್ಣವಾಗುತ್ತದೆ” ಪ್ರತಿಭಾವಂತ ವಿದ್ಯಾರ್ಥಿಗಳ ಯಶಸ್ಸಿನ ಹಿಂದೆ ಪಾಲಕರ ಅಧಿಕ ಶ್ರಮ ಇರುತ್ತದೆ. ಆದ್ದರಿಂದ ಅವರನ್ನು ಸನ್ಮಾನಿಸುವುದು ನಮ್ಮ ಕರ್ತವ್ಯ ಎಂದು ಹೇಳಿದರು.
ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳು ಮತ್ತು ಶಿಕ್ಷಕರು
ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ. 96.80 ಅಂಕಗಳಿಸಿದ ಶಾಹೀನಬಾನು ಗೌ. ಮುಲ್ಲಾ, ಶೇ. 94.56 ಗಳಿಸಿದ ಕೃತಿಕಾ ಕು. ಹಿರೇಗೌಡ್ರ, ಶೇ. 89.60 ಗಳಿಸಿದ ಪವಿತ್ರಾ ಮ. ಮಾಡಳ್ಳಿ, ಶೇ. 88.00 ಗಳಿಸಿದ ಬಸವ್ವ ಮ. ಆಡಿನವರ, ಮತ್ತು ಶೇ. 87.68 ಗಳಿಸಿದ ಚೇತನಾ ಮ. ಹಿರೇಮಠ ಇವರ ಪಾಲಕರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಗಿರೀಶ ಜಿ. ಪಾಟೀಲ ಶಿಕ್ಷಕರಾದ ಬಸವರಾಜ ಸೊರಟೂರ, ರಾಮಕೃಷ್ಣ ರಾಮಗಿರಿ, ಭಾನುಮತಿ ಕುಸಗೂರ, ಕುಬೇರಗೌಡ ಹಿರೇಗೌಡ, ಗಣೇಶ ಬ್ಯಾಲಹುಣಸಿ, ಮಲ್ಲಪ್ಪ ಕೋರಿ, ರವಿರಾಜ ನಾಯಕ, ವಿಠಲ್ ಬೆಳ್ಳಗಿ ಮತ್ತು ವಿದ್ಯಾರ್ಥಿಗಳು ಸೇರಿದಂತೆ ಇತರರು ಭಾಗವಹಿಸಿದ್ದರು.
ಪೋಟೋ:
ತಾಲೂಕಿನ. ರೊಟ್ಟಿಗವಾಡ ಗ್ರಾಮದ ಜಿ.ಕೆ. ಹಿರೇಗೌಡರ ಪ್ರೌಢಶಾಲೆಯಲ್ಲಿ ನಡೆದ 79ನೇ ಸ್ವಾತಂತ್ರ್ಯೋತ್ಸವ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಪಾಲಕರನ್ನು ಕಾಜೇಜಿನ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

