
ಕುಂದಗೋಳ: “ಸ್ವಾತಂತ್ರ್ಯ ಹೋರಾಟವು ಕೇವಲ ಪರಕೀಯ ಆಳ್ವಿಕೆಯಿಂದ ಬಿಡುಗಡೆಯಾಗಿರಲಿಲ್ಲ, ಅದು ನಮ್ಮ ಗುರುತು, ಘನತೆ ಮತ್ತು ಸಮಾನ ಹಕ್ಕುಗಳಿಗಾಗಿ ನಡೆಸಿದ ಹೋರಾಟವಾಗಿತ್ತು. ಆ ಮಹನೀಯರ ತ್ಯಾಗವನ್ನು ಸ್ಮರಿಸುತ್ತಾ, ಸಂವಿಧಾನದ ಜಾತ್ಯತೀತ ಮತ್ತು ಸಾಮಾಜಿಕ ನ್ಯಾಯದ ಮೌಲ್ಯಗಳನ್ನು ಎತ್ತಿಹಿಡಿಯುವುದು ನಮ್ಮೆಲ್ಲರ ಕರ್ತವ್ಯ,” ಎಂದು ಹೇಳಿದರು. ಎಂದು ತಹಶಿಲ್ದಾರರ ರಾಜು ಮಾವರಕರ ಹೇಳಿದರು.
ಅವರು ಶುಕ್ರವಾರ ಪಟ್ಟಣದ ತಹಶಿಲ್ದಾರ ಕಚೇರಿ ಆವರದಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೇರವೆರಿಸಿ ಮಾತನಾಡಿ ಮಹನಿಯರ ಆದರ್ಶ ತತ್ವ ಹಾಗೂ ಆದರ್ಶಗಳ ಆಧಾರದ ಮೇಲೆ, ತಾಲೂಕಿನ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. ಹಾಗೂ ನಮ್ಮ ದೇಶವು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಾ ಜಾಗತಿಕ ಮಟ್ಟದಲ್ಲಿ ಉತ್ತುಗಂಕ್ಕೆ ಸಾಗುತ್ತಿದೆ ಎಂದರು.
ತಾಲ್ಲೂಕಿನಲ್ಲಿ “ಅತಿವೃಷ್ಟಿಯಿಂದ ಬೆಳೆ ಹಾನಿಗೊಳಗಾದ 21,400 ರೈತರಿಗೆ ₹12.5 ಕೋಟಿ ಪರಿಹಾರ ನೀಡಲಾಗಿದೆ. ಭೂಮಿ ದಾಖಲೆಗಳ ಡಿಜಿಟಲೀಕರಣ, ಮ್ಯುಟೇಶನ್ ಪ್ರಗತಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿದ್ದು, 16 ಲಕ್ಷಕ್ಕೂ ಹೆಚ್ಚು ಪುಟಗಳನ್ನು ಸ್ಕ್ಯಾನ್ ಮಾಡಲಾಗಿದೆ. ಶಾಸಕರು ಮತ್ತು ಸಾರ್ವಜನಿಕರ ಸಹಕಾರದಿಂದ ಕುಂದಗೋಳವನ್ನು ರಾಜ್ಯಕ್ಕೆ ಮಾದರಿ ತಾಲೂಕನ್ನಾಗಿ ಮಾಡುವ ಗುರಿ ಹೊಂದಿದ್ದೇವೆ,” ಎಂದು ತಮ್ಮ ಆಡಳಿತದ ಪ್ರಗತಿಯನ್ನು ವಿವರಿಸಿದರು.

ನಂತರ 79ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಶಾಸಕ ಎಂ ಆರ್ ಪಾಟೀಲ ಮಾತನಾಡಿ ನಾಡಿನ ಜನತೆಗೆ ಶುಭಾಶಯ ಕೋರಿ ”ಸ್ವಾತಂತ್ರ್ಯಾನಂತರ ಭಾರತವು ಎಲ್ಲಾ ಕ್ಷೇತ್ರಗಳಲ್ಲಿಯೂ ಗಣನೀಯ ಪ್ರಗತಿ ಸಾಧಿಸಿದೆ. ಇತ್ತೀಚಿನ ದಿನಗಳಲ್ಲಿ ನಮ್ಮ ದೇಶವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿರುವುದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ವಿಷಯ. ಬಲಿಷ್ಠ ರಾಷ್ಟ್ರಗಳೇ ಆರ್ಥಿಕ ಸಂಕಷ್ಟ ಎದುರಿಸುತ್ತಿರುವಾಗ, ಭಾರತವು ಸ್ಥಿರವಾಗಿ ಮುನ್ನಡೆಯುತ್ತಿರುವುದು ನಮ್ಮ ಶಕ್ತಿಯನ್ನು ಜಗತ್ತಿಗೆ ತೋರಿಸಿದೆ. ನಾವೆಲ್ಲರೂ ಜಾತಿ, ಮತ, ಪಂಥಗಳನ್ನು ಮೀರಿ ಒಗ್ಗಟ್ಟಿನಿಂದ ದೇಶದ ಪ್ರಗತಿಗಾಗಿ ಶ್ರಮಿಸಬೇಕು ಮತ್ತು ನಮ್ಮ ಸ್ವಾತಂತ್ರ್ಯವನ್ನು ಗೌರವಿಸಬೇಕು,” ಎಂದು ಕರೆ ನೀಡಿದರು.
ಪಟ್ಟಣದ ವಿವಿಧ ಶಾಲಾ ಮಕ್ಕಳಿಂದ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮೆರಗು ನೀಡಿದವು. ಪೌರಕಾರ್ಮಿಕರಿಗೆ, ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು. ನಂತರ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಣೆ, ಅಂಗವಿಕಲರಿಗೆ ಚೇರ್ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಅಧ್ಯಕ್ಷ ಶ್ಯಾಮಸಂದ್ರ ದೇಸಾಯಿ, ಉಪಾಧ್ಯಕ್ಷ ಮಂಜುನಾಥ್ ಹಿರೇಮಠ,ತಾಲೂಕು ಪಂಚಾಯಿತಿ ಇ ಓ ಜಗದೀಶ್ ಕಮ್ಮಾರ್, ಶಿವಾನಂದ್ ಬೆಂತೂರ, ಡಾ,ಅರವಿಂದ ಕಟಗಿ, ಬಸವರಾಜ್ ಶಿರಸಂಗಿ, ಮಾಣಿಕ್ಯ ಚೆಲ್ಲೂರು, ಕಲ್ಲಪ್ಪ ಹರಿಕುಣಿ, ಬಸವರಾಜ ಹರವಿ, ಸಿಪಿಐ ಶಿವಾನಂದ್ ಅಂಬಿಗೇರ, ಶಂಕರಗೌಡ ದೊಡ್ಡಮನಿ, ಕಲ್ಲಪ್ಪ ಹರಕುಣಿ, ಬಸವರಾಜ ಯೋಗಪ್ಪನವರ,ಹಾಗೂ ಇತರರು ಇದ್ದರು.
ಫೋಟೋ 1 ಕುಂದಗೋಳ:ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಶುಕ್ರವಾರ 79ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಡಾ.ಅರವಿಂದ ಎಮ್ ಕಟಗಿ, ಗೌತಮ್ ಭಾಫನ, ಅಭಯ ಪಾರ್ಲೆಜಾ, ಕಿರಣ ಅರಮನೆ, ಕವಿತಾ ಕೆ ಎಮ್, ಬಸನಗೌಡ ಶೀಲವಂತರ ಅವರಿಗೆ ಶಾಸಕ ಎಂ ಆರ್ ಪಾಟೀಲ್ ಹಾಗೂ ಅವರು ತಹಸಿಲ್ದಾರ್ ರಾಜು ಮಾವರಕ ಸನ್ಮಾನಿಸಿ ಗೌರವಿಸಿದರು.
ಫೋಟೋ 2 ಕುಂದಗೋಳ ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಶುಕ್ರವಾರ 79ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ತಹಶಿಲ್ದಾರ ರಾಜು ಮಾವರಕ ಮಾತನಾಡಿದರು,

