ಸಂಶಿ ಕೆಎಲ್ಇ ಕಾಲೇಜಿನಲ್ಲಿ ಸ್ವಾತಂತ್ರ್ಯೋತ್ಸವ: ನಿವೃತ್ತ ತಹಶೀಲ್ದಾರ ಜಿ.ವಿ. ಪಾಟೀಲ ಸೇರಿದಂತೆ ಇತರ ಗಣ್ಯಮಾನರಿಗೆ ಸನ್ಮಾನ

Spread the love

ಸಂಶಿ ಕೆಎಲ್ಇ ಕಾಲೇಜಿನಲ್ಲಿ ಸ್ವಾತಂತ್ರ್ಯೋತ್ಸವ: ನಿವೃತ್ತ ತಹಶೀಲ್ದಾರ ಜಿ.ವಿ. ಪಾಟೀಲರಿಗೆ ಸನ್ಮಾನ

ಕುಂದಗೋಳ:ತಾಲ್ಲೂಕಿನ ಸಂಶಿ ಗ್ರಾಮದ ಕೆಎಲ್ಇ ಮಹಾವಿದ್ಯಾಲಯದ ಸಭಾಂಗಣದಲ್ಲಿ 79ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವನ್ನು ಶುಕ್ರವಾರದಂದು ವಿಜೃಂಭಣೆಯಿಂದ ಆಚರಿಸಲಾಯಿತು.
ಇದೇ ಸಮಯದಲ್ಲಿ ಸಮಾಜ ಸೇವೆಯನ್ನು ಗುರುತಿಸಿ ವಿರಕ್ತಮಠದ ಪರಮಪೂಜ್ಯ ಶ್ರೀ ಚನ್ನಬಸವ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ನಿವೃತ್ತ ತಹಶೀಲ್ದಾರ ಮತ್ತು ಇತರ ಗಣ್ಯರನ್ನು ಸನ್ಮಾನಿಸಲಾಯಿತು.
ಕಳೆದ 40 ವರ್ಷಗಳಿಂದ ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ, ಸಂಶಿ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಕಂದಾಯ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ, ನಂತರ ಹುಬ್ಬಳ್ಳಿ ನಗರದ ತಹಶೀಲ್ದಾರರಾಗಿ ನಿವೃತ್ತಿ ಹೊಂದಿದ ಶ್ರೀ ಜಿ. ವಿ. ಪಾಟೀಲ್, ಶ್ರೀ ದಾನಣ್ಣವರ ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀ ಗಿರೀಶ್ ಪಾಟೀಲ್ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸಮಾಜಕ್ಕೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಸ್ಥಾನಿಕ ಆಡಳಿತ ಮಂಡಳಿ ಸದಸ್ಯರಾದ ಬಿ. ಬಿ. ಬೂದಿಹಾಳ್, ಬಿ. ಎಂ. ಕಜ್ಜಿ, ಕರ್ನಾಟಕ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಎನ್. ಎಫ್. ನದಾಫ್, ರೈತ ಸಂಘದ ಅಧ್ಯಕ್ಷ ಶ್ರೀ ಎಲ್ಲಪ್ಪ ದ್ಯಾವನೂರ, ಪ್ರಾಚಾರ್ಯರಾದ ರಮೇಶ್ ಅತ್ತಿಗೇರಿ, ಹಾಗೂ ಗ್ರಾಮದ ಗುರುಹಿರಿಯರು ಮತ್ತು ರೈತ ಸಂಘದ ಸದಸ್ಯರು ಭಾಗವಹಿಸಿದ್ದರು. ಈ ಕಾರ್ಯಕ್ರಮವು ಸ್ವಾತಂತ್ರ್ಯದ ಸಂಭ್ರಮದೊಂದಿಗೆ ಸಮಾಜ ಸೇವೆಯನ್ನು ಗೌರವಿಸುವ ಉತ್ತಮ ವೇದಿಕೆಯಾಯಿತು.

Leave a Reply

Your email address will not be published. Required fields are marked *