
ಬೆಂಗಳೂರು: ಕಳೆದ ಒಂದು ತಿಂಗಳಿನಿಂದ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಸುಜಾತಾ ಭಟ್ ಅವರು, ತಮ್ಮ ಮಗಳು ಸತ್ತ ಕಥೆಯು ಸಂಪೂರ್ಣ ಸುಳ್ಳು ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಒಪ್ಪಿಕೊಂಡಿದ್ದಾರೆ.
“ನನಗೆ ಮಗಳೇ ಇರಲಿಲ್ಲ. ಕೆಲವರು ಹೇಳಿಕೊಟ್ಟಂತೆ ಆಸ್ತಿಗಾಗಿ ನಾನು ಆ ಸುಳ್ಳನ್ನು ಹೇಳಬೇಕಾದ ಪರಿಸ್ಥಿತಿ ಬಂದಿತ್ತು” ಎಂದು ಸುಜಾತಾ ಭಟ್ ತಿಳಿಸಿದ್ದಾರೆ. ಈ ರೀತಿ ಸುಳ್ಳು ಹೇಳುವಂತೆ ಪ್ರಚೋದಿಸಿದವರು ಗಿರೀಶ್, ಮಟ್ಟಣ್ಣ ಮತ್ತು ತಿಮ್ಮರೋಡಿ ಎಂದು ಅವರು ಹೆಸರಿಸಿದ್ದಾರೆ.
ತಮ್ಮ ತಾತನ ಆಸ್ತಿಯನ್ನು ತಮ್ಮ ಗಮನಕ್ಕೆ ತಾರದೇ ಮತ್ತು ಸಹಿ ಪಡೆಯದೆ ವರ್ಗಾಯಿಸಿದ್ದರಿಂದ ಸಿಟ್ಟಿಗೆದ್ದು ಅವರು ಹೇಳಿದಂತೆ ಸುಳ್ಳು ಕಥೆ ಕಟ್ಟಿದೆ ಎಂದು ಸುಜಾತಾ ಭಟ್ ವಿವರಿಸಿದ್ದಾರೆ. ಮಾಧ್ಯಮದ ಮೂಲಕ ಸಾರ್ವಜನಿಕರಿಗೆ ಕ್ಷಮೆ ಕೇಳಿದ ಅವರು, ತಮ್ಮ ಈ ಹೇಳಿಕೆಯಿಂದ ಉಂಟಾದ ಗೊಂದಲಕ್ಕಾಗಿ ವಿಷಾದ ವ್ಯಕ್ತಪಡಿಸಿದ್ದಾರೆ.

