ಮಾನಹಾನಿ ಯತ್ನದ ಆಕ್ಷೇಪ – ಸಂಬಂಧಪಟ್ಟವರ ವಿರುದ್ಧ ಕ್ರಮಕ್ಕೆ ಮನವಿ: ಮುಂಖಡ ಶಿವಾನಂದ ಮುತ್ತಣ್ಣವರ

Spread the love

ಹುಬ್ಬಳ್ಳಿ: ಮನವಿ ಪತ್ರದಲ್ಲಿ ತಿಳಿಸಿದಂತೆ, ಮಂಗಳವಾರಪೇಟೆ ಗಣಪತಿ ವಿಸರ್ಜನೆ ವೇಳೆ ನಡೆದ ಘಟನೆಗೆ ಸಂಬಂಧಿಸಿದಂತೆ, ರಾಜಕೀಯ ದ್ವೇಷದಿಂದ ತನ್ನ ಮೇಲೆ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಸಿ ರೈತ ಹಾಗೂ ರಾಜಕೀಯ ಕಾರ್ಯಕರ್ತ ಶಿವಾನಂದ ಹನುಮಂತಪ್ಪ ಮುತ್ತಣ್ಣವರ ಅವರು ಘಂಟಿಕೇರಿ ಪೊಲೀಸ್ ಠಾಣೆಯಲ್ಲಿ ಮನವಿ ಸಲ್ಲಿಸಿದ್ದಾರೆ. ಈ ಘಟನೆ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.

ಘಟನೆ ಹಿನ್ನೆಲೆ
ಮನವಿ ಪತ್ರದಲ್ಲಿ ತಿಳಿಸಿದಂತೆ, ಸೆಪ್ಟೆಂಬರ್ 10, 2025 ರಂದು ಸಂಜೆ 7:40ರ ಸುಮಾರಿಗೆ ಕು.ವೆಂ.ಪು. ವೃತ್ತದ ಬಳಿ ಪ್ರವೀಣ ಶಂಕ್ರಪ್ಪ ಬೆಲ್ಲದ ಮತ್ತು ಮೂರ್ನಾಲ್ಕು ಮಂದಿ ತನ್ನ ದ್ವಿಚಕ್ರ ವಾಹನಕ್ಕೆ ಅಡ್ಡ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಶಿವಾನಂದ ಮನವಿಯಲ್ಲಿ ತಿಳಿಸಿದ್ದಾರೆ. “ಮಂಗಳವಾರಪೇಟೆ ಗಣಪತಿ ನೋಡಲು ಬಂದಿದ್ದಕ್ಕೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ” ಎಂದು ಜೀವ ಬೆದರಿಕೆ ಹಾಕಿದ್ದಾರೆಂದು ಆರೋಪಿಸಲಾಗಿದೆ. ಅಲ್ಲದೆ, “ನಾವು ಎಂ.ಎಲ್.ಎ ಮಹೇಶ ಟೆಂಗಿನಕಾಯಿ ಅವರ ಕಡೆಯವರು, ನಿನ್ನ ರಾಜಕೀಯ ಭವಿಷ್ಯ ಹಾಳು ಮಾಡುವುದೇ ನಮ್ಮ ಉದ್ದೇಶ” ಎಂದು ಬೆದರಿಸಿದ್ದಾರೆ ಎನ್ನಲಾಗಿದೆ.

ರಾಜಕೀಯ ಪ್ರೇರಿತ ದೂರು
ಮನವಿ ಪತ್ರದಲ್ಲಿ ತಿಳಿಸಿದಂತೆ, ಘಟನೆ ನಡೆದ ಅದೇ ರಾತ್ರಿ 10 ಗಂಟೆ ಸುಮಾರಿಗೆ ಬೆಂಡಿಗೇರಿ ಠಾಣೆಯ ಇನ್ಸ್‌ಪೆಕ್ಟರ್ ಅವರಿಂದ ಕರೆ ಬಂದಿತ್ತು. ಠಾಣೆಗೆ ಹೋದಾಗ, ತನ್ನ ವಿರುದ್ಧ ಘಂಟಿಕೇರಿ ಠಾಣೆಯಲ್ಲಿ ಉಮರ ಗಾಂಜೆವಾಲೆ ಅವರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಪ್ರವೀಣ ಬೆಲ್ಲದ ಸುಳ್ಳು ದೂರು ನೀಡಿದ್ದು ತಿಳಿದುಬಂದಿದೆ. “ನಾನು ಬಿಜೆಪಿಯಲ್ಲಿದ್ದಾಗ ಮಹೇಶ ಟೆಂಗಿನಕಾಯಿ ಅವರು ನನ್ನ ತೇಜೋವಧೆಗೆ ಯತ್ನಿಸಿದ್ದರು. ಈಗ ಕಾಂಗ್ರೆಸ್‌ಗೆ ಬಂದ ನಂತರವೂ ಮಂಜುನಾಥ ಮದಿಹಳ್ಳಿ ಹಾಗೂ ಇತರೆ ಬಿಜೆಪಿ ಬೆಂಬಲಿಗರೊಂದಿಗೆ ಸೇರಿ ನನ್ನ ರಾಜಕೀಯ ಭವಿಷ್ಯವನ್ನು ಹಾಳು ಮಾಡುವ ಉದ್ದೇಶದಿಂದ ಈ ಸುಳ್ಳು ಪ್ರಕರಣ ದಾಖಲಿಸಿದ್ದಾರೆ” ಎಂದು ಶಿವಾನಂದ ಆರೋಪಿಸಿದ್ದಾರೆ.

ಮಾನಹಾನಿಗೆ ಯತ್ನ
ಮನವಿ ಪತ್ರದಲ್ಲಿ ತಿಳಿಸಿದಂತೆ, ದಿನಪತ್ರಿಕೆಗಳಲ್ಲಿ ಸುಳ್ಳು ಸುದ್ದಿಗಳನ್ನು ಪ್ರಕಟಿಸಿ ತನ್ನ ಮಾನ ಮರ್ಯಾದೆಯನ್ನು ಹಾಳು ಮಾಡಲಾಗುತ್ತಿದೆ ಎಂದು ಶಿವಾನಂದ ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ. ಈ ಕುರಿತು ಹಿರಿಯರೊಂದಿಗೆ ಚರ್ಚಿಸಿದ ನಂತರ ದೂರು ನೀಡುತ್ತಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಅವರು ಪೊಲೀಸರಿಗೆ ಮನವಿ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಮುಂಖಡರಾದ ಅಡಿವೇಪ್ಪ ಶಿವಳ್ಳಿ, ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *