ಶಾಸಕರ ಅನುದಾನದಲ್ಲಿ ಅಕ್ಷಯ್ ಪಾರ್ಕ್ ಸಮುದಾಯ ಭವನ ನಿರ್ಮಾಣ: ಶಾಸಕ ಮಹೇಶ್‌ ತೆಂಗಿನಕಾಯಿ ಭೂಮಿಪೂಜೆ

Spread the love

ಹುಬ್ಬಳ್ಳಿ: ನಗರದ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ವಾರ್ಡ್ ನಂಬರ್ 51 ರಲ್ಲಿರುವ ಅಕ್ಷಯ್ ಪಾರ್ಕ್ ಸಮುದಾಯ ಭವನದ ಎರಡನೇ ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಶಾಸಕ ಮಹೇಶ್‌ ತೆಂಗಿನಕಾಯಿ ಭೂಮಿಪೂಜೆ ನೆರವೇರಿಸಿದರು. ಶಾಸಕರ ಅನುದಾನದಲ್ಲಿ ಹಂಚಿಕೆಯಾದ ₹10 ಲಕ್ಷ ವೆಚ್ಚದಲ್ಲಿ ಈ ನಿರ್ಮಾಣ ಕಾರ್ಯ ನಡೆಯಲಿದೆ.

ಕಾಮಗಾರಿಗೆ ಭೂಮಿ ಪೂಜೆ ನೆರವಿರೆಸಿ ಮಾತನಾಡಿದ ಶಾಸಕ ಮಹೇಶ್‌ ತೆಂಗಿನಕಾಯಿ, ಸಾರ್ವಜನಿಕರ ಅವಶ್ಯಕತೆಗಳಿಗೆ ಅನುಗುಣವಾಗಿ ಸಮುದಾಯ ಭವನದ ಎರಡನೇ ಅಂತಸ್ತಿನ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಕಾಮಗಾರಿಯು ಗುಣಮಟ್ಟದಿಂದ ಮತ್ತು ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳಲಿದೆ ಎಂದು ಭರವಸೆ ನೀಡಿದರು. ಸಮುದಾಯ ಭವನವು ಸ್ಥಳೀಯರ ಸಭೆ-ಸಮಾರಂಭಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಉಪಾಧ್ಯಕ್ಷ ಕೃಷ್ಣ ಗಂಡಗಾಳೆಕರ್, ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ರಾಜು ಕಾಳೆ, ಮಾಜಿ ಮಹಾಪೌರ ಪ್ರಕಾಶ ಕ್ಯಾರ್‌ಕಟ್ಟಿ, ರವಿ ಬಂಕಾಪುರ, ಶ್ರೀಮತಿ ಲೀಲಾವತಿ ಪಾಸ್ತೆ, ವಾರ್ಡ್ ಅಧ್ಯಕ್ಷ ಸಿದ್ದೇಶ್‌ ಕಬಾಡ, ಶರಣು ಪಾಟೀಲ್, ಬಲಭೀಮ್ ಪೋದ್ದಾರ್, ಸುಬ್ರಹ್ಮಣ್ಯ ಶಿರ್ಕೋಳ, ಡಾ. ರವೀಂದ್ರ, ಗುರುನಾಥ ಮುರಗೋಡ, ಸುಧೀರ್ ಹೊಸಮನಿ, ಮಲ್ಲಿಕಾರ್ಜುನ ಉಳ್ಳಿ, ಶಂಕರ್ ಪ್ರೊಹಿತ್, ಶ್ರೀಮತಿ ರೇಖಾ ಸರ್ಜನ್, ಅಮರನಾಥ ಸರ್ಜನ, ಶ್ರೀಮತಿ ಪುಷ್ಪ ಹಬೀಬ, ವಿವೇಕ ಜಿಗುಳೂರು, ಬಸವರಾಜ್ ಮದರ್‌ಖಂಡಿ, ಬಸವರಾಜ್ ಹೊಸಮನಿ ಸೇರಿದಂತೆ ವಾರ್ಡ್‌ನ ಅನೇಕ ಹಿರಿಯರು ಮತ್ತು ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *