
ಚಾಮರಾಜನಗರದಲ್ಲಿ ಸರಣಿ ಅಪಘಾತ – ನಾಲ್ವರು ಬಾಲಕರ ದುರ್ಮರಣ
ಚಾಮರಾಜನಗರ:
ಜಿಲ್ಲೆಯ ಗಾಳೀಪುರ ಸಮೀಪದ ರಿಂಗ್‌ರೋಡ್‌ನಲ್ಲಿ ಶನಿವಾರ ಸಂಜೆ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ನಾಲ್ವರು ಬಾಲಕರು ಪ್ರಾಣ ಕಳೆದುಕೊಂಡ ದಾರುಣ ಘಟನೆ ನಡೆದಿದೆ.
ಮೊಪೆಡ್‌ನಲ್ಲಿ ಪ್ರಯಾಣಿಸುತ್ತಿದ್ದ ರೆಹಾನ್, ಆದಾನ್ ಪಾಷಾ, ಫೈಜಲ್ ಮತ್ತು ಮೆರಾನ್‌ರನ್ನು ಲಾರಿ–ಕಾರು–ಮೊಪೆಡ್ ನಡುವೆ ಸಂಭವಿಸಿದ ಅಪಘಾತ ಕಸಿದುಕೊಂಡಿತು. ಮೆರಾನ್ ಸ್ಥಳದಲ್ಲೇ ಮೃತಪಟ್ಟರೆ, ಉಳಿದ ಮೂವರು ಗಂಭೀರ ಗಾಯಗೊಂಡಿದ್ದರು. ತುರ್ತುವಾಗಿ ಸಿಕ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ಕಳುಹಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೂವರು ಕೊನೆಯುಸಿರೆಳೆದಿದ್ದಾರೆ.
ಈ ಕುರಿತು ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಅಪಘಾತದ ನಿಖರ ಕಾರಣ ಪತ್ತೆ ಹಚ್ಚಲು ತನಿಖೆ ಆರಂಭಿಸಿದ್ದಾರೆ.

