ಡಿ.ಜೆ.ಗೆ ನಿರ್ಬಂಧ: ಸರ್ಕಾರದ ಆದೇಶ ಉಲ್ಲಂಘಿಸಿದರೆ ಕಠಿಣ ಕ್ರಮ; ಹಾವೇರಿಯಲ್ಲಿ ಮೊದಲ ಎಫ್‌ಐಆರ್ ದಾಖಲು!
ಹಾವೇರಿ: ಗಣೇಶೋತ್ಸವದ ಮೆರವಣಿಗೆಗಳಲ್ಲಿ ಡಿ.ಜೆ. (ಡಿಸ್ಕ್ ಜಾಕಿ) ಬಳಸದಂತೆ ಸರ್ಕಾರ ನೀಡಿರುವ ಕಟ್ಟುನಿಟ್ಟಿನ ಆದೇಶವನ್ನು ಉಲ್ಲಂಘಿಸಿದವರ ವಿರುದ್ಧ ಹಾವೇರಿ ಪೊಲೀಸರು ಕಠಿಣ ಕ್ರಮ ಜರುಗಿಸಿದ್ದಾರೆ. ನಿಯಮ ಮೀರಿ ಡಿ.ಜೆ. ಬಳಸಿದ ಆರೋಪದಡಿ ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಸಕ್ತ ವರ್ಷದ ಗಣೇಶೋತ್ಸವದ ಮೊದಲ ಎಫ್‌ಐಆರ್ ದಾಖಲಾಗಿದೆ. ಯುವ ಸಮುದಾಯ ಸಂಭ್ರಮದ ಹೆಸರಿನಲ್ಲಿ ಸಾರ್ವಜನಿಕ ಶಾಂತಿಗೆ ಭಂಗ ತಂದರೆ ಕಾನೂನು ಕ್ರಮ ಎದುರಿಸುವುದು ಅನಿವಾರ್ಯ ಎಂಬುದನ್ನು ಈ ಘಟನೆ ಎತ್ತಿ ತೋರಿಸಿದೆ. ಘಟನೆ ವಿವರಹಾವೇರಿಯ ಸುಭಾಷ್ ವೃತ್ತದಲ್ಲಿ ‘ಹಾವೇರಿ…

