ನಿಮ್ಮ ಊರಿನಲ್ಲಿ ನಕಲಿ ವೈದ್ಯರಿದ್ದರೆ ಕೂಡಲೇ ಎಚ್ಚೆತ್ತುಕೊಳ್ಳಿ: ಹಿಪ್ಪರಗಿ ಗ್ರಾಮದ ನಕಲಿ ದವಾಖಾನೆ ಜಪ್ತಿ

ರಬಕವಿ-ಬನಹಟ್ಟಿ: ರಬಕವಿ-ಬನಹಟ್ಟಿ ಸಮೀಪದ ಹಿಪ್ಪರಗಿ ಗ್ರಾಮದಲ್ಲಿ ನಕಲಿ ವೈದ್ಯರೊಬ್ಬರು ನಡೆಸುತ್ತಿದ್ದ ಅನಧಿಕೃತ ಆಸ್ಪತ್ರೆಯ ಮೇಲೆ ಜಮಖಂಡಿ ತಾಲ್ಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಜಿ.ಎಸ್. ಗಲಗಲಿ ನೇತೃತ್ವದ ತಂಡ ದಾಳಿ ನಡೆಸಿದೆ. ಈ ದಾಳಿಯಲ್ಲಿ ಆಸ್ಪತ್ರೆಯನ್ನು ಸಂಪೂರ್ಣವಾಗಿ ಜಪ್ತಿ ಮಾಡಲಾಗಿದೆ. ನಕಲಿ ವೈದ್ಯ ಅರುಣ ಕುಲಗೋಡ ಎಂಬಾತ ಯಾವುದೇ ಪರವಾನಿಗೆ ಇಲ್ಲದೇ ಈ ದವಾಖಾನೆ ನಡೆಸುತ್ತಿದ್ದ. ರೋಗಿಗಳ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದ ಈ ವ್ಯಕ್ತಿಯ ಬಗ್ಗೆ ಮಾಹಿತಿ ಪಡೆದ ಆರೋಗ್ಯ ಇಲಾಖೆಯ ತಂಡ, ಮಂಗಳವಾರ ದಿಢೀರ್ ದಾಳಿ ನಡೆಸಿ ಆತನ…

Read More

ಸೋರುತ್ತಿರುವ ಶಾಲೆಯ ಸಂಕಟ: ಗೋವನಕೊಪ್ಪ ಮಕ್ಕಳ ಭವಿಷ್ಯ ಅತಂತ್ರ

ಕುಳಗೇರಿ ಕ್ರಾಸ್ (ಬಾಗಲಕೋಟೆ): ಮಳೆಗಾಲದ ಪ್ರತಿ ಹನಿಯು ಗೋವನಕೊಪ್ಪ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಮಕ್ಕಳ ಭವಿಷ್ಯದ ಮೇಲೆ ಬೀಳುತ್ತಿರುವ ಆತಂಕದ ಕಥೆ ಹೇಳುತ್ತಿದೆ. ಶಾಲಾ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದ್ದು, ಮೇಲ್ಛಾವಣಿಯಿಂದ ನೀರು ಸೋರುತ್ತಿದೆ. ಇದು ಕೇವಲ ಗೋಡೆಗಳು ಶಿಥಿಲಗೊಳ್ಳುತ್ತಿರುವ ಸುದ್ದಿಯಲ್ಲ, ಬದಲಿಗೆ ಶಿಕ್ಷಣದ ಭವಿಷ್ಯವೇ ಕುಸಿಯುತ್ತಿರುವ ಸಂಕೇತ. ಅಪಾಯದ ಅರಿವಿನಿಂದಾಗಿ ಶಿಕ್ಷಕರು ಮಕ್ಕಳನ್ನು ಗ್ರಾಮದ ದೇವಸ್ಥಾನಕ್ಕೆ ಸ್ಥಳಾಂತರಿಸಿದ್ದಾರೆ. ಆದರೆ, ಅಲ್ಲಿ ಸೂಕ್ತ ವ್ಯವಸ್ಥೆಗಳಿಲ್ಲದೆ ಪಾಠ ಪ್ರವಚನ ನಡೆಸಲಾಗುತ್ತಿದೆ.ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು, ಕಿರಿದಾದ ಜಾಗದಲ್ಲಿ, ಸರಿಯಾದ ಬೆಳಕಿನ…

Read More