ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನ ಆಹ್ವಾನಿಸಬಾರದೆಂದು ಸಂವಿಧಾನದಲ್ಲಿ ಇದೆಯೇ?’: ಸಚಿವ ಸಂತೋಷ್ ಲಾಡ್ ಪ್ರಶ್ನೆ

ಬಳ್ಳಾರಿ: ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಯ್ಕೆ ಮಾಡಿರುವುದಕ್ಕೆ ಮಾಜಿ ಸಂಸದ ಪ್ರತಾಪ್ ಸಿಂಹ ವ್ಯಕ್ತಪಡಿಸಿರುವ ವಿರೋಧಕ್ಕೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿರುಗೇಟು ನೀಡಿದ್ದಾರೆ. “ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಬಾರದೆಂದು ನಮ್ಮ ಸಂವಿಧಾನದಲ್ಲಿ ಇದೆಯೇ? ಎಲ್ಲದಕ್ಕೂ ಧರ್ಮ, ಜಾತಿಯನ್ನು ಹುಡುಕುತ್ತಾ ಹೋದರೆ ಏನೂ ಮಾಡಲಾಗುವುದಿಲ್ಲ” ಎಂದು ಲಾಡ್ ಪ್ರಶ್ನಿಸಿದ್ದಾರೆ. ನಮ್ಮ ದೇಶದಲ್ಲಿ ಅತೀ ಹೆಚ್ಚು ದಾನ ಮಾಡುವವರು ಅಜೀಂ ಪ್ರೇಮ್‌ಜಿ ಫೌಂಡೇಷನ್‌ನವರು. ಅವರು ಸುಮಾರು ಎರಡೂವರೆ ಲಕ್ಷ ಕೋಟಿ ರೂಪಾಯಿ…

Read More

ಕಂಪ್ಲಿ: ಸ್ಮಶಾನ ರಸ್ತೆ ಜಲಾವೃತ, ಶವ ಹೊತ್ತೊಯ್ಯಲು ಹರಸಾಹಸ – ಸ್ಮಶಾನಕ್ಕೆ ದಾರಿ ಯಾವುದಯ್ಯಾ?

ಬಳ್ಳಾರಿ: ಕಂಪ್ಲಿ ತುಂಗಭದ್ರಾ ಜಲಾಶಯ ತುಂಬಿ ನದಿಗೆ ಲಕ್ಷಾಂತರ ಕ್ಯೂಸೆಕ್ ನೀರು ಬಿಟ್ಟಿರುವ ಪರಿಣಾಮ, ಕಂಪ್ಲಿ-ಕೋಟೆ ಸಮೀಪದ ನದಿ ತೀರದಲ್ಲಿರುವ ವಿವಿಧ ಸಮುದಾಯಗಳ ಸ್ಮಶಾನಕ್ಕೆ ಹೋಗುವ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ. ಇದರಿಂದಾಗಿ ಮೃತದೇಹಗಳ ಅಂತ್ಯಕ್ರಿಯೆ ನಡೆಸಲು ಕುಟುಂಬಸ್ಥರು ಹರಗೋಲುಗಳಲ್ಲಿ ಶವಗಳನ್ನು ಹೊತ್ತು, ಪ್ರವಾಹದ ನೀರಿನಲ್ಲೇ ಹರಸಾಹಸ ಮಾಡುವ ದಾರುಣ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆ ಇಂದು ನಿನ್ನೆಯದಲ್ಲ. ಪ್ರತಿ ವರ್ಷ ಜಲಾಶಯ ಭರ್ತಿಯಾಗಿ ಪ್ರವಾಹ ಬಂದಾಗಲೆಲ್ಲಾ ಈ ಸ್ಮಶಾನ ರಸ್ತೆ ಮುಳುಗುವುದು ಸಾಮಾನ್ಯವಾಗಿದೆ. ಆದರೂ, ದಶಕಗಳಿಂದಲೂ ಈ…

Read More