ಭೀಕರ ರಸ್ತೆ ಅಪಘಾತ: ಚಿಂತಾಮಣಿ ಬಳಿ ಶಾಲಾ ವಾಹನ-ಬೈಕ್ ಡಿಕ್ಕಿ, ನಾಲ್ವರು ಸಾವು

ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ತಾಲ್ಲೂಕು ವ್ಯಾಪ್ತಿಯಲ್ಲಿ ಗುರುವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಮೃತರಾಗಿ ದುರ್ಘಟನೆ ಸಂಭವಿಸಿದೆ. ಶಾಲಾ ವಾಹನ ಮತ್ತು ದ್ವಿಚಕ್ರ ವಾಹನದ ನಡುವೆ ಈ ಭೀಕರ ಡಿಕ್ಕಿ ಸಂಭವಿಸಿದೆ ಎಂದು ತಿಳಿದುಬಂದಿದೆ. ಘಟನೆಯ ವಿವರ: ಚಿಂತಾಮಣಿ ತಾಲ್ಲೂಕಿನ ಬುರುಡಗುಂಟೆ ಬಳಿ ಶಾಲಾ ವಾಹನ ಮತ್ತು ದ್ವಿಚಕ್ರ ವಾಹನದ ನಡುವೆ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಮೂವರು ಮಕ್ಕಳು ಸೇರಿದಂತೆ ಒಟ್ಟು ನಾಲ್ಕು ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಮೃತರ ಮತ್ತು…

Read More

ಗೋಮಯ ಕ್ರಾಂತಿ: ದೊಡ್ಡಬಳ್ಳಾಪುರದ ರಾಷ್ಟ್ರೋತ್ಥಾನ ಗೋಶಾಲೆ ಹಣತೆಗಳಿಗೆ ವಿದೇಶಕ್ಕೂ ಬೇಡಿಕೆ!

ವರದಿ: ಪ್ರವೀಣ ಗಿಡಸಕ್ಕನವರ ದೊಡ್ಡಬಳ್ಳಾಪುರ: ಪ್ಲಾಸ್ಟಿಕ್ ಹಾಗೂ ರಾಸಾಯನಿಕಯುಕ್ತ ಉತ್ಪನ್ನಗಳ ಭರಾಟೆಯ ನಡುವೆ, ದೊಡ್ಡಬಳ್ಳಾಪುರ ತಾಲ್ಲೂಕಿನ ಘಾಟಿಸುಬ್ರಹ್ಮಣ್ಯ ಕ್ಷೇತ್ರದ ಬಳಿ ಇರುವ ‘ರಾಷ್ಟ್ರೋತ್ಥಾನ ಗೋಶಾಲೆ’ ಗೋಮಯದ ಮೂಲಕ ಹೊಸ ಕ್ರಾಂತಿಗೆ ನಾಂದಿ ಹಾಡಿದೆ. ಈ ಗೋಶಾಲೆ ತಯಾರಿಸುತ್ತಿರುವ ಪರಿಸರ ಸ್ನೇಹಿ ಗೋಮಯದ ಹಣತೆಗಳು ಈ ದೀಪಾವಳಿಗೆ ದೇಶ ಮಾತ್ರವಲ್ಲದೆ ವಿದೇಶಕ್ಕೂ ರಫ್ತಾಗುತ್ತಿದ್ದು, ಸ್ವಾವಲಂಬನೆಯ ದಾರಿಯನ್ನು ತೋರಿಸುತ್ತಿವೆ. ದೀಪಾವಳಿ ಹಬ್ಬದ ಅಂಗವಾಗಿ ಇಲ್ಲಿನ ಗೋಮಯದ ಹಣತೆಗಳಿಗೆ ಅಪಾರ ಬೇಡಿಕೆ ಉಂಟಾಗಿದೆ. ಮಾರುಕಟ್ಟೆಯಲ್ಲಿ ಸುಮಾರು ಮೂರು ಕೋಟಿ ಹಣತೆಗಳ ಬೇಡಿಕೆ…

Read More

ದೊಡ್ಡಬಳ್ಳಾಫುರ:ಪಟಾಕಿ ಅವಘಡ: ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಬಾಲಕ ಸಾವು, ಹಲವರಿಗೆ ಸುಟ್ಟ ಗಾಯ

ದೊಡ್ಡಬಳ್ಳಾಪುರ: ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ನಡೆದ ಪಟಾಕಿ ಅವಘಡದಿಂದ 15 ವರ್ಷದ ಬಾಲಕನೊಬ್ಬ ಮೃತಪಟ್ಟಿದ್ದು, ಪೊಲೀಸ್ ಕಾನ್ಸ್ಟೆಬಲ್ ಸೇರಿ ಹಲವರು ಗಾಯಗೊಂಡಿರುವ ದುರ್ಘಟನೆ ದೊಡ್ಡಬಳ್ಳಾಪುರ ಹೊರವಲಯದ ಮುತ್ತೂರಿನಲ್ಲಿ ನಡೆದಿದೆ.ಮೃತ ಬಾಲಕನನ್ನು ತನುಷ್ ರಾವ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ತನುಷ್ ರಾವ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ವಿವರ:ಶುಕ್ರವಾರ ಸಂಜೆ 5.30ರ ಸುಮಾರಿಗೆ ‘ಫ್ರೆಂಡ್ಸ್ ವಿನಾಯಕ ಗ್ರೂಪ್’ ವತಿಯಿಂದ ಗಣೇಶ ವಿಸರ್ಜನೆ ಮೆರವಣಿಗೆ ನಡೆಯುತ್ತಿತ್ತು. ಮೆರವಣಿಗೆಗೆ…

Read More

ರಾಜ್ಯಕ್ಕೆ ಕಾಲಿಟ್ಟ ಆಫ್ರಿಕನ್ ಹಂದಿ ಜ್ವರ; ಚಿಕ್ಕಬಳ್ಳಾಪುರದಲ್ಲಿ 100 ಹಂದಿಗಳ ಸಾವು

ಚಿಕ್ಕಬಳ್ಳಾಪುರ: ಆತಂಕಕಾರಿ ಬೆಳವಣಿಗೆಯೊಂದರಲ್ಲಿ, ಕರ್ನಾಟಕ ರಾಜ್ಯಕ್ಕೂ ಆಫ್ರಿಕನ್ ಹಂದಿ ಜ್ವರ (African Swine Fever) ಕಾಲಿಟ್ಟಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನಲ್ಲಿರುವ ಹಂದಿ ಫಾರ್ಮ್‌ನಲ್ಲಿ ಈ ರೋಗ ದೃಢಪಟ್ಟಿದ್ದು, ಈಗಾಗಲೇ ನೂರಕ್ಕೂ ಹೆಚ್ಚು ಹಂದಿಗಳು ಸಾವನ್ನಪ್ಪಿವೆ. ಏನಿದು ಘಟನೆ?ಚಿಂತಾಮಣಿ ತಾಲ್ಲೂಕಿನ ಹೆಬ್ಬರಿ ಗ್ರಾಮದ ಬಳಿಯಿರುವ ಯಾರ್ಕ್‌ಶೇರ್ ತಳಿಯ ಹಂದಿ ಫಾರ್ಮ್‌ನಲ್ಲಿ ಕಳೆದ ಒಂದು ವಾರದಿಂದ ಸರಣಿ ಹಂದಿಗಳ ಸಾವು ಸಂಭವಿಸುತ್ತಿತ್ತು. ಇದರಿಂದ ಆತಂಕಗೊಂಡ ಫಾರ್ಮ್ ಮಾಲೀಕರು ಮತ್ತು ಪಶುಪಾಲನಾ ಇಲಾಖೆ ಅಧಿಕಾರಿಗಳು, ಸತ್ತ ಹಂದಿಗಳ ಮಾದರಿಗಳನ್ನು ಸಂಗ್ರಹಿಸಿ…

Read More