ಸೊಬಗಿನ ‘ಆರಿ’ ಕಲೆ ಕಲಿತ ಗ್ರಾಮೀಣ ಮಹಿಳೆಯರು: ಭಾಗ್ಯನಗರದಲ್ಲಿ 10 ದಿನಗಳ ಉಚಿತ ತರಬೇತಿ ಶಿಬಿರದ ಯಶಸ್ವಿ ಸಮಾರೋಪ
ಕೊಪ್ಪಳ: ಮಹಿಳೆಯರು ಮನೆಯಲ್ಲಿ ಕುಳಿತು ಮೊಬೈಲ್ನಲ್ಲಿ ಸಮಯ ವ್ಯರ್ಥ ಮಾಡುವ ಬದಲು, ಆರಿ ಕೌಶಲ್ಯದಂತಹ ತರಬೇತಿಗಳನ್ನು ಪಡೆದು ಸ್ವಾವಲಂಬಿ ಜೀವನ ನಡೆಸಬೇಕು ಎಂದು ಕೊಪ್ಪಳ ಇನ್ನರ್ ವೀಲ್ ಸಂಸ್ಥೆಯ ಅಧ್ಯಕ್ಷೆ ಸುನೀತಾ ಎಸ್. ಅಂಟ ಕರೆ ನೀಡಿದರು. ನಗರದ ಭಾಗ್ಯನಗರದ ಸುಮೇಧಾ ಫ್ಯಾಷನ್ ಇನ್ಸ್ಟಿಟ್ಯೂಟ್ನಲ್ಲಿ ಸೋಮವಾರ ಆಯೋಜಿಸಲಾಗಿದ್ದ ಗ್ರಾಮೀಣ ಮಹಿಳೆಯರಿಗಾಗಿನ 10 ದಿನಗಳ ಉಚಿತ ‘ಆರಿ ಕೌಶಲ್ಯ ತರಬೇತಿ’ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಮಣಿಪಾಲದ T M G ಸುನಿಧಿ…

