ಶಾಲೆ ಆವರಣದಲ್ಲಿ ಆಘಾತಕಾರಿ ಘಟನೆ: ವಿರಾಜಪೇಟೆ ಶಾಲೆಯ 25ಕ್ಕೂ ಅಧಿಕ ಮಕ್ಕಳ ಮೇಲೆ ಜೇನು ದಾಳಿ; ಆಸ್ಪತ್ರೆಗೆ ದಾಖಲು

ವಿರಾಜಪೇಟೆ: ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ 25ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ಜೇನು ಹಿಂಡು ಏಕಾಏಕಿ ದಾಳಿ ನಡೆಸಿದ್ದು, ಪ್ರದೇಶದಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಪ್ರತಿದಿನದಂತೆ ವಿದ್ಯಾರ್ಥಿಗಳು ಶಾಲೆಗೆ ಆಗಮಿಸಿ ಬೆಳಗಿನ ಪ್ರಾರ್ಥನೆ ಮುಗಿಸಿದ್ದರು. ಬಿಸಿ ಹಾಲು ಪಡೆಯಲು ಸಾಲಿನಲ್ಲಿ ನಿಂತಿದ್ದ ವೇಳೆ, ಸಮೀಪದ ತೋಟದಿಂದ ಹಾರಿಬಂದ ಜೇನು ಹಿಂಡು ಮಕ್ಕಳು ಮತ್ತು ಶಿಕ್ಷಕರ ಮೇಲೆ ದಾಳಿ ಮಾಡಿತು. ಮಕ್ಕಳು ನೋವಿನಿಂದ ಚೀರಾಡುತ್ತಿದ್ದ ಶಬ್ದ ಕೇಳುತ್ತಿದ್ದಂತೆ ಸ್ಥಳೀಯರು…

Read More

ಕುಶಾಲನಗರ: ಡಿಜೆ ಸೌಂಡ್ ಬಳಕೆ, 5 ವಾಹನ ವಶ, ಪ್ರಕರಣ ದಾಖಲು

ಮಡಿಕೇರಿ: ಕುಶಾಲನಗರದಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ಸಂದರ್ಭದಲ್ಲಿ ನಿಯಮ ಮೀರಿ ಅತಿಯಾದ ಶಬ್ದ ಹೊರಹೊಮ್ಮಿಸುವ ಡಿಜೆ ಸೌಂಡ್ ಸಿಸ್ಟಂ ಬಳಸಿದ ಹಿನ್ನೆಲೆಯಲ್ಲಿ ಪೊಲೀಸರು ಐದು ವಾಹನಗಳನ್ನು ವಶಪಡಿಸಿಕೊಂಡು, ಚಾಲಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.ಆಗಸ್ಟ್ 31 ರಂದು ಕುಶಾಲನಗರದಲ್ಲಿ ನಡೆದ ಗಣೇಶ ವಿಸರ್ಜನಾ ಕಾರ್ಯಕ್ರಮದ ಮೆರವಣಿಗೆಯಲ್ಲಿ ಶಬ್ದ ಮಾಲಿನ್ಯ ನಿಯಂತ್ರಣ ಕಾಯ್ದೆ ಪ್ರಕಾರ ನಿಗದಿಪಡಿಸಿದ್ದ ಶಬ್ದದ ಮಿತಿಯನ್ನು ಉಲ್ಲಂಘಿಸಲಾಗಿದೆ. ಮೆರವಣಿಗೆಯಲ್ಲಿ ಅಳವಡಿಸಿದ್ದ ಪ್ರೆಶರ್ ಮಿಡ್ ಸ್ಪೀಕರ್ ನಿಂದ ಅತಿಯಾದ ಶಬ್ದ ಹೊರಹೊಮ್ಮಿಸುತ್ತಿದ್ದು, ಇದು ನಿಯಮಬಾಹಿರ ಎಂದು ಜಿಲ್ಲಾ ಪೊಲೀಸ್…

Read More

ಮಡಿಕೇರಿ: ಪೊಲೀಸರ ಮನೆಯಲ್ಲೇ ಕಳ್ಳತನ ಪ್ರಕರಣ ಭೇದಿಸಿದ ಕೊಡಗು ಪೊಲೀಸರು

ಮಡಿಕೇರಿ: ಪೊಲೀಸರ ವಸತಿ ಗೃಹದಲ್ಲೇ ನಡೆದ ಕಳ್ಳತನ ಪ್ರಕರಣವನ್ನು ಕೊಡಗು ಜಿಲ್ಲಾ ಪೊಲೀಸರು ಭೇದಿಸಿ, ಕೃತ್ಯದಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳನ್ನು ಮಧ್ಯಪ್ರದೇಶದಲ್ಲಿ ಬಂಧಿಸಿದ್ದಾರೆ. ಈ ಮೂಲಕ ಕರ್ನಾಟಕ ಮತ್ತು ಹೊರ ರಾಜ್ಯಗಳಲ್ಲಿ ನಡೆದ ಅನೇಕ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಕಳ್ಳರ ಜಾಡು ಹಿಡಿದು ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ.ಜೂನ್ 17ರಂದು ಮಡಿಕೇರಿ ನಗರದ ಓಲ್ಡ್ ರೈಫಲ್ ರೇಂಜ್ ಪೊಲೀಸ್ ವಸತಿ ಗೃಹದಲ್ಲಿ ಎಂಟು ಮನೆಗಳ ಬಾಗಿಲು ಮುರಿದು ಕಳ್ಳತನ ಮಾಡಲಾಗಿತ್ತು. ಈ ಪೈಕಿ ಮೂರು ಮನೆಗಳಿಂದ…

Read More