‘ಭಾರತ ಭಾಗ್ಯ ವಿಧಾತ’ ಬಿರುದಾಂಕಿತ ಪ್ರಧಾನಿ ಮೋದಿ: ಉಡುಪಿ ಶ್ರೀ ಕೃಷ್ಣ ಮಠದಲ್ಲಿ ‘ನವ ಸಂಕಲ್ಪ’ ಪಾಲನೆಗೆ ಕರೆ

ಉಡುಪಿ: ನ 28: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರದಂದು (ನವೆಂಬರ್ 28,) ಕೃಷ್ಣನೂರು ಉಡುಪಿಗೆ ಐತಿಹಾಸಿಕ ಭೇಟಿ ನೀಡಿದರು. ಪ್ರಧಾನಿಯವರ ಈ ಭೇಟಿಯು ‘ಲಕ್ಷ ಕಂಠ ಗೀತಾ ಪಾರಾಯಣ’ ಕಾರ್ಯಕ್ರಮದ ಮುಖ್ಯ ಭಾಗವಾಗಿತ್ತು. ಪ್ರಧಾನಿಯವರ ಆಗಮನದ ಹಿನ್ನೆಲೆಯಲ್ಲಿ ಉಡುಪಿ ನಗರದಲ್ಲಿ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿತ್ತು ಹಾಗೂ ಅದ್ಧೂರಿ ರೋಡ್ ಶೋ ಮತ್ತು ಮಹತ್ವದ ಆಧ್ಯಾತ್ಮಿಕ ಸಮಾರಂಭಗಳು ಜರುಗಿದವು. ​ಮಂಗಳೂರು ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಉಡುಪಿ ತಲುಪಿದ ಪ್ರಧಾನಿಯವರು, ಬನ್ನಂಜೆ ವೃತ್ತದಿಂದ ಕಾಳಸಂಕ ವೃತ್ತದವರೆಗೆ…

Read More

ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಉಡುಪಿ ಭೇಟಿ: ಶಾಲೆಗಳಿಗೆ ರಜೆ ಘೋಷಣೆ

ಉಡುಪಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು (ನವೆಂಬರ್ 28) ಉಡುಪಿಗೆ ಭೇಟಿ ನೀಡಲಿದ್ದು, ‘ಲಕ್ಷ ಕಂಠ ಗೀತ ಪಾರಾಯಣ’ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಪ್ರಧಾನಿಯವರ ಭೇಟಿ ಹಾಗೂ ಬೃಹತ್ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಉಡುಪಿ ನಗರ ಮತ್ತು ಸುತ್ತಮುತ್ತಲಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ​ಪ್ರಧಾನಿ ಮೋದಿ ಅವರು ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಲಿದ್ದಾರೆ ಮತ್ತು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ವೇಳೆ ಬೃಹತ್ ರೋಡ್ ಶೋ ಸಹ…

Read More

ಪ್ರಧಾನಿ ನರೇಂದ್ರ ಮೋದಿ ನ. 28ರಂದು ಉಡುಪಿ ಶ್ರೀ ಕೃಷ್ಣಮಠಕ್ಕೆ ಆಗಮನ: ಲಕ್ಷಕಂಠ ಗೀತಾ ಪಾರಾಯಣದಲ್ಲಿ ಭಾಗಿ

ಕಾರ್ಯಕ್ರಮಕ್ಕೆ ಪ್ರಧಾನ ಮಂತ್ರಿ ಕಾರ್ಯಾಲಯದಿಂದ ಅಧಿಕೃತ ವೇಳಾಪಟ್ಟಿ ಪ್ರಕಟ ​ಉಡುಪಿ: ಶ್ರೀ ಕೃಷ್ಣಮಠದಲ್ಲಿ ನಡೆಯುತ್ತಿರುವ ಬೃಹತ್ ಗೀತೋತ್ಸವದ ಅಂಗವಾಗಿ ನವೆಂಬರ್ 28 ರಂದು ಆಯೋಜಿಸಲಾಗಿರುವ ಲಕ್ಷಕಂಠ ಗೀತಾ ಪಾರಾಯಣ ಸಮಾರಂಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾಗವಹಿಸುವುದು ಅಧಿಕೃತವಾಗಿ ಖಚಿತಗೊಂಡಿದೆ. ಶನಿವಾರ ಪ್ರಧಾನ ಮಂತ್ರಿ ಕಾರ್ಯಾಲಯವು (PMO) ಈ ಸಂಬಂಧ ಅಧಿಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಪ್ರಧಾನ ಮಂತ್ರಿ ಕಾರ್ಯಾಲಯದಿಂದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದ್ದು, ಹೆಲಿಪ್ಯಾಡ್ ಸೇರಿದಂತೆ ಕಾರ್ಯಕ್ರಮಕ್ಕೆ ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲು…

Read More

ಧರ್ಮಸ್ಥಳ ಪ್ರಕರಣದ ಹಿಂದೆ ರಾಜಕೀಯ ಷಡ್ಯಂತ್ರ: ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರೊಟ್ಟಿಗೆ ಮೋದಿ ಸರ್ಕಾರ ಇರುತ್ತೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ

ಬೆಳ್ತಂಗಡಿ: ದೇಶದಲ್ಲಿ ಬಹುಸಂಖ್ಯಾತರ ವಿರುದ್ಧ ಸದಾ ಕಾಲ ಷಡ್ಯಂತ್ರ ನಡೆಸುತ್ತಲೇ ಬಂದಿರುವ ಕಾಂಗ್ರೆಸ್ ಪಕ್ಷ, ಧರ್ಮಸ್ಥಳ ಪ್ರಕರಣವನ್ನು ಅದಕ್ಕಾಗಿಯೇ ಬಳಸಿಕೊಂಡಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದ್ದಾರೆ. ಮೋದಿ ಸರ್ಕಾರ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರೊಂದಿಗೆ ಇದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.‘ಧರ್ಮಸ್ಥಳ ಚಲೋ’ ಹಾಗೂ ‘ಸಮಾಜ ಜಾಗೃತಿ’ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಧರ್ಮಸ್ಥಳಕ್ಕೆ ಕೇವಲ ಒಂದು ವರ್ಗದವರು ಬರುವುದಿಲ್ಲ. ಎಲ್ಲಾ ವರ್ಗದವರೂ, ಅದರಲ್ಲೂ ವಿಶೇಷವಾಗಿ ಹಿಂದುಳಿದ ವರ್ಗದವರು,…

Read More

ಧರ್ಮಸ್ಥಳ ವಿರುದ್ಧ ಅಪಪ್ರಚಾರ: ₹4 ಲಕ್ಷ ಲಂಚ ನೀಡಿದ ಬುರುಡೆ ಗ್ಯಾಂಗ್? ವಿಶೇಷ ತನಿಖಾ ತಂಡಕ್ಕೆ ದೂರುದಾರ ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ

ಬೆಂಗಳೂರು: ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡಲು ₹4 ಲಕ್ಷದವರೆಗೂ ಹಣ ಪಡೆದಿರುವುದಾಗಿ ಮತ್ತು ಬೆದರಿಕೆ ಹಾಕಲಾಗಿತ್ತು ಎಂದು ಪ್ರಕರಣದ ದೂರುದಾರ ಚಿನ್ನಯ್ಯ ವಿಶೇಷ ತನಿಖಾ ತಂಡದ (ಎಸ್ಐಟಿ) ವಿಚಾರಣೆ ವೇಳೆ ಬಾಯ್ದಿಟ್ಟಿದ್ದಾನೆ. ಪ್ರಕರಣದ ಹಿಂದೆ ಹಣಕಾಸು ವ್ಯವಹಾರ ನಡೆದಿರುವುದನ್ನು ಆತ ಒಪ್ಪಿಕೊಂಡಿದ್ದಾನೆ ಎಂದು ಮೂಲಗಳಿಂದ ತಿಳಿದುಬಂದಿದೆ. ಹಂತ ಹಂತವಾಗಿ ಹಣ ನೀಡಿಕೆಚಿನ್ನಯ್ಯನ ಪ್ರಕಾರ, ಪ್ರಕರಣದ ಬುರುಡೆ ಗ್ಯಾಂಗ್‌ನ ಸೂತ್ರಧಾರಿಗಳು ಈ ಕೃತ್ಯಕ್ಕಾಗಿ ಹಂತ ಹಂತವಾಗಿ ಹಣ ನೀಡಿದ್ದರು. “ಐದು-ಹತ್ತು ಸಾವಿರದಂತೆ ಮೂರೂವರೆ ಲಕ್ಷದಿಂದ ನಾಲ್ಕು ಲಕ್ಷದವರೆಗೆ ಹಣ…

Read More

ಧರ್ಮಸ್ಥಳ ಬುರುಡೆ ಪ್ರಕರಣ: ಸೂತ್ರಧಾರಿಗಳಿಂದಲೇ ಪ್ರಮುಖ ಪಾತ್ರಧಾರಿ ಚಿನ್ನಯ್ಯನ ಮೇಲೆ ಹಲ್ಲೆ; ಎಸ್‌ಐಟಿ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಯಲು

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂದು ಹೇಳಿ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ್ದ ‘ಬುರುಡೆ’ ಪ್ರಕರಣದಲ್ಲಿ, ಆರೋಪದ ಪ್ರಮುಖ ಪಾತ್ರಧಾರಿ ಚಿನ್ನಯ್ಯನ ಮೇಲೆ ಸ್ವತಃ ಸೂತ್ರಧಾರಿಗಳೇ ಹಲ್ಲೆ ನಡೆಸಿದ್ದರು ಎಂಬ ಆಘಾತಕಾರಿ ವಿಷಯ ವಿಶೇಷ ತನಿಖಾ ತಂಡದ (ಎಸ್‌ಐಟಿ) ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ತಮಗೆ ಬೇಕಾದಂತೆ ಚಿನ್ನಯ್ಯ ವರ್ತಿಸದಿದ್ದ ಕಾರಣ ಈ ಹಲ್ಲೆ ನಡೆದಿದೆ ಎಂದು ಹೇಳಲಾಗುತ್ತಿದೆ. ಹಲ್ಲೆಯಿಂದ ನೊಂದಿದ್ದ ಚಿನ್ನಯ್ಯ:ಆಗಸ್ಟ್ 22ರಂದು ಬೆಳಿಗ್ಗೆ ಎಸ್‌ಐಟಿ ತಂಡ ಚಿನ್ನಯ್ಯನನ್ನು ವಿಚಾರಣೆಗೆ ಕರೆದಾಗ, ವೈದ್ಯಕೀಯ ತಪಾಸಣೆ…

Read More

ನಾನು ಹೇಳಿದ್ದು ಸುಳ್ಳು, ಕ್ಷಮಿಸಿ’ ಎಂದು ಕಣ್ಣೀರಿಟ್ಟ ಸುಜಾತಾ ಭಟ್!

ಬೆಳ್ತಂಗಡಿ: ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದ ಸುಜಾತಾ ಭಟ್ ಪ್ರಕರಣವು ಈಗ ಹೊಸ ತಿರುವು ಪಡೆದುಕೊಂಡಿದೆ. ತಮ್ಮನ್ನು ವಂಚಿಸಲಾಗಿದೆ ಎಂದು ಆರೋಪಿಸಿದ್ದ ಸುಜಾತಾ ಭಟ್, ಗುರುವಾರದಂದು ಎಸ್‌ಐಟಿ ವಿಚಾರಣೆಯಲ್ಲಿ “ನಾನು ಹೇಳಿದ್ದು ಎಲ್ಲವೂ ಸುಳ್ಳು. ತಪ್ಪಾಗಿದೆ, ನನ್ನನ್ನು ಬಿಟ್ಟುಬಿಡಿ. ದೂರು ಹಿಂಪಡೆಯುತ್ತೇನೆ” ಎಂದು ಕಣ್ಣೀರಿಟ್ಟಿದ್ದಾರೆ ಎನ್ನಲಾಗಿದೆ. ಸತ್ಯ ಬಯಲಾಯಿತೇ?ಬೆಳ್ತಂಗಡಿಯ ಎಸ್‌ಐಟಿ ಕಚೇರಿಯಲ್ಲಿ ನಡೆದ ವಿಚಾರಣೆಗಾಗಿ ಸುಜಾತಾ ಭಟ್ ಹಾಜರಾಗಿದ್ದರು. ವಿಚಾರಣೆ ವೇಳೆ, ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ಆರಂಭಿಸಿದ ಸುಜಾತಾ, ತಾನು ಮಾಡಿದ್ದು ದೊಡ್ಡ ತಪ್ಪು ಎಂದು…

Read More

ಹಣಕ್ಕಾಗಿ ಪವಿತ್ರ ಧರ್ಮಸ್ಥಳಕ್ಕೆ ಅಪಮಾನ: ಸತ್ಯ ಒಪ್ಪಿಕೊಂಡ ‘ಸುಳ್ಳು ಬುರುಡೆ’ ಚಿನ್ನಯ್ಯ!

ಬೆಳ್ತಂಗಡಿ: ಧರ್ಮಸ್ಥಳದ ಪಾವಿತ್ರ್ಯತೆಗೆ ಧಕ್ಕೆ ತಂದು, ನೂರಾರು ಶವಗಳನ್ನು ಹೂತು ಹಾಕಲಾಗಿದೆ ಎಂದು ಸುಳ್ಳು ಆರೋಪ ಹೊರಿಸಿದ್ದ ಬುರುಡೆ ಪ್ರಕರಣದ ಆರೋಪಿ ಚಿನ್ನಯ್ಯ, ಇದೀಗ ತನಿಖಾಧಿಕಾರಿಗಳ ಮುಂದೆ ತನ್ನ ಬಣ್ಣ ಬಯಲು ಮಾಡಿದ್ದಾನೆ. ಕೇವಲ ಹಣದ ಆಸೆಗಾಗಿ, ಕೆಲವು ದುಷ್ಟ ಶಕ್ತಿಗಳ ಕೈಗೊಂಬೆಯಾಗಿ ಈ ಪವಿತ್ರ ಕ್ಷೇತ್ರಕ್ಕೆ ಮಾಡಿದ ಅಪಮಾನದ ಸತ್ಯವನ್ನು ಒಪ್ಪಿಕೊಂಡಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಇಲ್ಲಿಯವರೆಗೆ ತಾನು ಹೂತುಹಾಕಿದ ಶವಗಳ ಬಗ್ಗೆ ಸುಳ್ಳು ಕಥೆಗಳನ್ನು ಹೇಳಿ ಪೊಲೀಸ್ ತನಿಖೆಯನ್ನು ದಾರಿ ತಪ್ಪಿಸುತ್ತಿದ್ದ…

Read More

ಬುರುಡೆ ಪ್ರಕರಣ: ಉಜಿರೆಯ ಮಹೇಶ್ ಶೆಟ್ಟಿ ಮನೆ ಮೇಲೆ ಎಸ್‌ಐಟಿ ದಾಳಿ

ಬೆಳ್ತಂಗಡಿ: ಹಲವಾರು ಮೃತದೇಹಗಳನ್ನು ಹೂತು ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಎಸ್‌ಐಟಿ (ವಿಶೇಷ ತನಿಖಾ ತಂಡ) ಬಂಧಿಸಿರುವ ಆರೋಪಿ ಚಿನ್ನಯ್ಯ ಸಿ.ಎನ್.ಗೆ ಆಶ್ರಯ ನೀಡಿದ ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿ ಅವರ ನಿವಾಸದ ಮೇಲೆ ಮಂಗಳವಾರ (ಆ.26) ಬೆಳಗ್ಗೆ ಸುಮಾರು 9:20ಕ್ಕೆ ಎಸ್‌ಐಟಿ ತಂಡ ದಾಳಿ ನಡೆಸಿದೆ.ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ನೇತೃತ್ವದಲ್ಲಿ ಅಧಿಕಾರಿಗಳ ತಂಡವು ಸೋಮವಾರ (ಆ.25) ಬೆಳ್ತಂಗಡಿ ನ್ಯಾಯಾಧೀಶರಿಂದ ಸರ್ಚ್ ವಾರಂಟ್ ಪಡೆದುಕೊಂಡು, ಆರೋಪಿ ಚಿನ್ನಯ್ಯನ ಜೊತೆಯಲ್ಲೇ ತಿಮರೋಡಿ ಮನೆಗೆ ಬಂದು ದಾಳಿ ನಡೆಸಿ ಪರಿಶೀಲನೆ…

Read More

ಕಾರ್ಕಳದಲ್ಲಿ ಹಣಕಾಸು ವ್ಯವಹಾರ ನಡೆಸುತ್ತಿದ್ದ ವ್ಯಕ್ತಿಯ ಹತ್ಯೆ

ಕಾರ್ಕಳ: ಇಲ್ಲಿನ ಕುಂಟಲಪಾಡಿ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್ ಒಂದರಲ್ಲಿ ವಾಸವಾಗಿದ್ದ ಮಂಗಳೂರು ಮೂಲದ ನವೀನ್ ಪೂಜಾರಿ (50) ಎಂಬವರನ್ನು ಇರಿದು ಕೊಲೆ ಮಾಡಲಾಗಿದೆ. ಈ ಘಟನೆ ಮಂಗಳವಾರ (ಆ.26) ಬೆಳಕಿಗೆ ಬಂದಿದೆ. ಘಟನಾ ವಿವರಕೊಲೆಯಾದ ನವೀನ್ ಪೂಜಾರಿ ಕಾರ್ಕಳದಲ್ಲಿ ನೆಲೆಸಿದ್ದು, ಹಣಕಾಸು ವ್ಯವಹಾರ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ. ಘಟನೆ ಬಗ್ಗೆ ಮಾಹಿತಿ ತಿಳಿದ ತಕ್ಷಣ ಕಾರ್ಕಳ ನಗರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಕೊಲೆಯ ಹಿಂದಿನ ನಿಖರ ಕಾರಣ ಮತ್ತು ಆರೋಪಿಗಳ ಪತ್ತೆಗಾಗಿ ಪೊಲೀಸರು ವಿವಿಧ…

Read More