ಶ್ರೀಲಂಕಾದಲ್ಲಿ ‘ದಿಟ್ವಾ’ ಚಂಡಮಾರುತದ ಭೀಕರತೆ; ಮೃತರ ಸಂಖ್ಯೆ 334ಕ್ಕೆ ಏರಿಕೆ, 400ಕ್ಕೂ ಹೆಚ್ಚು ಮಂದಿ ನಾಪತ್ತೆ
ಶ್ರೀಲಂಕಾ : ಕೊಲಂಬೊ: ನ 30 : ದಿಟ್ವಾ’ ಚಂಡಮಾರುತದಿಂದಾಗಿ ಶ್ರೀಲಂಕಾದಲ್ಲಿ ಉಂಟಾಗಿರುವ ಪ್ರವಾಹ ಮತ್ತು ಭೂಕುಸಿತಗಳ ಪರಿಣಾಮ ತೀವ್ರಗೊಂಡಿದ್ದು, ಮೃತರ ಸಂಖ್ಯೆ ಭಾನುವಾರ ತೀವ್ರವಾಗಿ ಏರಿಕೆ ಕಂಡಿದೆ. ಭಾನುವಾರದ ವರದಿಯಂತೆ ಒಟ್ಟು 334 ಜನರು ಸಾವನ್ನಪ್ಪಿದ್ದಾರೆ ಎಂದು ಶ್ರೀಲಂಕಾದ ವಿಪತ್ತು ನಿರ್ವಹಣಾ ಕೇಂದ್ರ (DMC) ದೃಢಪಡಿಸಿದೆ. ಇದು ಕಳೆದ ಎರಡು ದಶಕಗಳಲ್ಲಿ ದ್ವೀಪ ರಾಷ್ಟ್ರವನ್ನು ಬಾಧಿಸಿದ ಅತ್ಯಂತ ಭೀಕರ ನೈಸರ್ಗಿಕ ವಿಕೋಪವಾಗಿದೆ. ಭೂಕುಸಿತ ಮತ್ತು ಪ್ರವಾಹವೇ ಸಾವಿಗೆ ಮುಖ್ಯ ಕಾರಣ: ಕಳೆದ ವಾರ ದ್ವೀಪದಾದ್ಯಂತ ದಾಖಲೆ…

