

ಕುಂದಗೋಳ: ಮನುಷ್ಯ ಜನ್ಮ ತಾಳಿದ ಮೇಲೆ ಉತ್ತಮ ಕೆಲಸ ಹಾಗೂ ಸಾಧನೆಗಳನ್ನು ಮಾಡಿದಾಗ ಮಾತ್ರ ಆತನ ಬದುಕು ಸಾರ್ಥಕವಾಗುತ್ತದೆ ಎಂದು ಶಿರಹಟ್ಟಿ ಫಕ್ಕೀರೇಶ್ವರ ಮಠದ ಶ್ರೀ ದಿಂಗಾಲೇಶ್ವರ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ತಾಲೂಕಿನ ಗುಡೇನಕಟ್ಟಿ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ನವರಾತ್ರಿ ಮಹಾಮಂಗಳೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. “ಇಂದಿನ ದಿನಗಳಲ್ಲಿ ಮಕ್ಕಳು ಹೆತ್ತ ತಂದೆ-ತಾಯಿಗಳನ್ನೇ ಮರೆಯುತ್ತಿದ್ದಾರೆ. ಅವರನ್ನು ಕೀಳಾಗಿ ಕಾಣುವ ಪ್ರವೃತ್ತಿ ಹೆಚ್ಚುತ್ತಿದೆ. ಆದರೆ, ಹೆತ್ತವರನ್ನು ದೇವರಂತೆ ಪೂಜಿಸಿದಾಗ ಮಾತ್ರ ನಮ್ಮ ಜನ್ಮ ಸಾರ್ಥಕವಾಗುತ್ತದೆ ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕು,” ಎಂದು ಶ್ರೀಗಳು ಕಿವಿಮಾತು ಹೇಳಿದರು.
ಇದಕ್ಕೂ ಮುನ್ನ, ಗ್ರಾಮದಲ್ಲಿ ದೇವಿಯ ಉತ್ಸವ ಮೂರ್ತಿಯನ್ನು 108 ಕುಂಭಗಳೊಂದಿಗೆ ವಾದ್ಯ-ಮೇಳಗಳ ಸಮೇತ ಪ್ರಮುಖ ಬೀದಿಗಳಲ್ಲಿ ಭಕ್ತಿಪೂರ್ವಕವಾಗಿ ಮೆರವಣಿಗೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಹಸ್ರಾರು ಭಕ್ತಾದಿಗಳಿಗೆ ಹೋಳಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ವೇದಮೂರ್ತಿ ಚೆನ್ನವೀರಸ್ವಾಮಿ ಹಿರೇಮಠ, ಮೃತ್ಯುಂಜಯ ದೇವರು, ತಿಪ್ಪಣ್ಣ ಪುಟ್ಟಣ್ಣವರ, ಶಾಂತಪ್ಪ ಕುಸುಗಲ, ನೀಲವ್ವ ಹೊಸಳ್ಳಿ, ಚಿದಾನಂದ ಕುಸುಗಲ, ಶಿವಪ್ಪ ಸಿದ್ದನವರ,ದೇವಪ್ಪ ಹೊಸಳ್ಳಿ,ಶಿವಪ್ಪ ದಾನಮ್ಮನವರ, ಚನ್ನಬಸಪ್ಪ ಕಟ್ಟಿಕಾರ, ಶಿವಲಿಂಗಪ್ಪ ಕಳಸಣ್ಣವರ, ಮಾನಪ್ಪ ಬಡಿಗ್ಯಾರ, ಮಲ್ಲಪ್ಪ ಕಂಬಳಿ, ಶೇಕಪ್ಪ ಮಲ್ಲಿಗವಾಡ, ಬಸವರಾಜ ಯೋಗಪ್ಪನವರ,ಪಕೀರಪ್ಪ ಮೂಲಿಮನಿ, ಹನುಮಂತಪ್ಪ ಸಿದ್ದುಣ್ಣವರ,ಹನುಮಂತ ಬೆಳ್ಳಟ್ಟಿ ಸೇರಿದಂತೆ ಗ್ರಾಮದ ಹಿರಿಯರು, ಯುವಕರು ಹಾಗೂ ಭಕ್ತಾದಿಗಳು ಪಾಲ್ಗೊಂಡಿದ್ದರು.

