ಬೋರಗಾಂವ್-ಭಾಟನಾಗನೂರ ರಸ್ತೆ ಸುಧಾರಣೆ ಕಾಮಗಾರಿಗೆ ಸಂಸದೆ ಪ್ರಿಯಾಂಕ ಜಾರಕಿಹೊಳಿ ಚಾಲನೆ

Spread the love

ಬೆಳಗಾವ: ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಸದೆ ಪ್ರಿಯಾಂಕ ಜಾರಕಿಹೊಳಿ ಅವರು, ನಿಪ್ಪಾಣಿ ವಿಧಾನಸಭಾ ಕ್ಷೇತ್ರದ ಬೋರಗಾಂವ್ ವೃತ್ತದಲ್ಲಿ ₹3.50 ಕೋಟಿ ವೆಚ್ಚದ ರಸ್ತೆ ಸುಧಾರಣೆ ಕಾಮಗಾರಿಗೆ ಮಂಗಳವಾರದಂದು ಚಾಲನೆ ನೀಡಿದರು.

ಭಾಟನಾಗನೂರ ಬೋರಗಾಂವವಾಡಿ ರಸ್ತೆ (ರಾಜಿ-98)ಯ ಕಿ.ಮೀ 35.38 ರಿಂದ 38.00 ವರೆಗಿನ (ಬೋರಗಾಂವವಾಡಿ ಕ್ರಾಸ್‌ನಿಂದ ಬೋರಗಾಂವ ವೃತ್ತದವರೆಗೆ) ರಸ್ತೆಯ ದುರಸ್ತಿ ಮತ್ತು ಸುಧಾರಣಾ ಕಾರ್ಯಕ್ಕೆ ಸಂಸದರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಬೋರಗಾಂವ್ ಪಟ್ಟಣ ಪಂಚಾಯಿತಿಗೆ ಭೇಟಿ ನೀಡಿದ ಪ್ರಿಯಾಂಕ ಜಾರಕಿಹೊಳಿ, ಪದಾಧಿಕಾರಿಗಳಿಂದ ಸನ್ಮಾನ ಸ್ವೀಕರಿಸಿದರು. ನಂತರ, ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಮುಖಂಡ ಉತ್ತಮ ಪಾಟೀಲ, ಬೋರಗಾಂವ್ ಪಟ್ಟಣ ಪಂಚಾಯಿತಿ ಪದಾಧಿಕಾರಿಗಳು, ಸದಸ್ಯರು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು. ಈ ಕಾಮಗಾರಿಯು ಕ್ಷೇತ್ರದ ಜನರಿಗೆ ಉತ್ತಮ ಸಂಪರ್ಕ ಒದಗಿಸುವಲ್ಲಿ ಸಹಕಾರಿಯಾಗಲಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *