ಬಡವರಿಗೆ ಅನೂಕೂಲ ಆಗುವ ಹಿತದೃಷ್ಟಿಯಿಂದ ಪಟ್ಟಾ ಬುಕ್ ವಿತರಣೆ ಗ್ರಾ ಪಂ ಅಧ್ಯಕ್ಷ ಭೀಮಪ್ಪ ಮಾಯಣ್ಣವರ

Spread the love

ಕುಂದಗೋಳ: ತಾಲೂಕಿನ ಯರಗುಪ್ಪಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸ ಮುಳ್ಳಹಳ್ಳಿ ಗ್ರಾಮದ ಸಂತ್ರಸ್ತರಿಗೆ ನಿವೇಶನದ ಹಕ್ಕುಪತ್ರ ವಿತರಣೆಗಾಗಿ ಪ್ರತಿ ಫಲಾನುಭವಿಯಿಂದ ₹3,000 ಸಂಗ್ರಹಿಸುತ್ತಿರುವ ಕ್ರಮವನ್ನು ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ, ತಮ್ಮ ವಿರುದ್ಧ ಕೆಲ ಕಿಡಿಗೇಡಿಗಳು ರಾಜಕೀಯ ಪ್ರೇರಿತವಾಗಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ನೀಡಿ, ಸುಳ್ಳು ಆರೋಪಗಳನ್ನು ಮಾಡುತ್ತಿದ್ದು, ನಕಲಿ ಸಹಿ ಬಳಸಿ ದೂರು ನೀಡುವ ಮೂಲಕ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಅವರು ಗುರುವಾರದಂದು ಯರಗುಪ್ಪಿ ಗ್ರಾಮ ಪಂಚಾಯತಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅಧ್ಯಕ್ಷ. ಭೀಮಪ್ಪ ಮಾಯಣ್ಣವರ ಮಾತನಾಡಿ: “2010-11ರಲ್ಲಿ ಪ್ರವಾಹದಿಂದ ಸ್ಥಳಾಂತರಗೊಂಡ ಹೊಸ ಮುಳ್ಳಹಳ್ಳಿ ಗ್ರಾಮದ 320 ಮನೆಗಳ ಫಲಾನುಭವಿಗಳಿಗೆ ಹಕ್ಕುಪತ್ರ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಸರ್ಕಾರದ ನಿಯಮದ ಪ್ರಕಾರ ಪೀ ₹1,000 ಮಾತ್ರ ಪಡೆಯಲು ಅವಕಾಶವಿದೆ. ಆದರೆ, ಗ್ರಾಮದ ಅಭಿವೃದ್ಧಿ ಹಾಗೂ ನೈರ್ಮಲೀಕರಣದ ದೃಷ್ಟಿಯಿಂದ, ಪಂಚಾಯಿತಿಯ 16 ಸದಸ್ಯರು ಸರ್ವಾನುಮತದಿಂದ ಠರಾವು ಪಾಸ ಮಾಡಿ ಹೆಚ್ಚುವರಿಯಾಗಿ ₹2,000 ಸೇರಿ ಅಭಿವೃದ್ಧಿ ಶುಲ್ಕ ಸೇರಿಸಿ ಒಟ್ಟು ₹3,000 ಪಡೆಯಲು ನಿರ್ಣಯ ಕೈಗೊಂಡಿದ್ದೇವೆ,” ಎಂದು ಸ್ಪಷ್ಟಪಡಿಸಿದರು.
ಅಭಿವೃದ್ಧಿ ಕಾರ್ಯಕ್ಕೆ ಹಣ ಬಳಕೆ
​ಸರ್ಕಾರದಿಂದ ಬರುವ ಅನುದಾನ ಎಲ್ಲಾ ಅಭಿವೃದ್ಧಿ ಕಾರ್ಯಗಳಿಗೆ ಸಾಕಾಗುವುದಿಲ್ಲ ಪಟ್ಟಾ ಬುಕಗಾಗಿ ಪಡೆದ ಹಣವನ್ನು ಯಾವುದೇ ಕಾರಣಕ್ಕೂ ದುರುಪಯೋಗಪಡಿಸಿಕೊಳ್ಳುವುದಿಲ್ಲ. ಪ್ರತಿಯೊಬ್ಬ ಫಲಾನುಭವಿಯಿಂದ ಪಡೆದ ಹಣಕ್ಕೆ ಅಧಿಕೃತ ರಸೀದಿ ನೀಡಲಾಗುತ್ತಿದೆ. ಈ ನಿರ್ಧಾರಕ್ಕೆ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಚಪ್ಪಾಳೆ ತಟ್ಟಿ ಒಪ್ಪಿಗೆ ಸೂಚಿಸಿದ್ದರು ಹಾಗೂ ನಾವು ಈ ವಸೂಲಾತಿ ಹಣವನ್ನು ಮುಳ್ಳೊಳ್ಳಿ, ಯರಗುಪ್ಪಿ, ಚಿಕ್ಕನೇರ್ತಿ ಗ್ರಾಮಗಳ ಅಭಿವೃದ್ಧಿಗೆ ವಿನಿಯೋಗ ಮಾಡುತ್ತೇವೆ ಕೆಲ ಕಡಿಕೆಡಿಗಳು ಪೋರ್ಜರಿ ಸಹಿ ಮಾಡಿ ತಾಲ್ಲೂಕು ಪಂಚಾಯತ ಇಒ, ಜಿಲ್ಲಾ ಪಂಚಾಯತ ಯವರಿಗೂ ಸಹ ನಮ್ಮ ವಿರುದ್ದ ಮನವಿ ನೀಡಿದ್ದಾರೆ.‌ಇದು ಸತ್ಯಕ್ಕೆ ದೂರವಾದ ಮಾತು ನಾವು ಈಗಾಗಲೇ 35 ಪಟ್ಟಾ ಬುಕ್ ವಿತರಣೆ ‌ಮಾಡಿದ್ದೇವೆ, ಅವರಿಂದ 03 ಸಾವಿರ ತೆಗೆದುಕೊಂಡು ಅದಕ್ಕೆ ರಷೀದಿ ಕೂಡ ನೀಡಿದ್ದೇವೆ ಎಂದು ಭೀಮಣ್ಣ ಮಾಯಣ್ಣವರ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ನಕಲಿ ಸಹಿಗಳನ್ನು ಹೊಂದಿದ ದೂರುಗಳ ಪ್ರತಿಗಳನ್ನು ಪ್ರದರ್ಶಿಸಿದ ಅಧ್ಯಕ್ಷರಾದ ಭೀಮಪ್ಪ ಮಾಯಣ್ಣವರ, ಸಂಬಂಧಿಸಿದ ಅಧಿಕಾರಿಗಳು”ಈ ಪೋರ್ಜರಿ ಸಹಿ ಮಾಡಿದ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ನಮಗೆ ನ್ಯಾಯ ಒದಗಿಸಬೇಕು,” ಎಂದು ಮನವಿ ಮಾಡಿಕೊಂಡರು

​ನಕಲಿ ಸಹಿ ಬಳಸಿ ದೂರು: ಸದಸ್ಯರ ಆರೋಪ
​ಪಂಚಾಯಿತಿ ಸದಸ್ಯ ಶ್ರೀಕಾಂತ್ ಯಕ್ಕಣ್ಣನವರ್ ಮಾತನಾಡಿ, “ಕೆಲವೇ ಕೆಲವು ವ್ಯಕ್ತಿಗಳು ರಾಜಕೀಯ ದುರುದ್ದೇಶದಿಂದ ನಮ್ಮ ವಿರುದ್ಧ ತೇಜೋವಧೆ ಮಾಡುತ್ತಿದ್ದಾರೆ. ಫಲಾನುಭವಿಗಳ ನಕಲಿ ಸಹಿ ಬಳಸಿ ತಹಶೀಲ್ದಾರ್, ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಈ ಷಡ್ಯಂತ್ರದ ಹಿಂದೆ ಬೇರೆ ಊರಿನ ರಾಜಕೀಯ ವ್ಯಕ್ತಿಯ ಕೈವಾಡವಿದೆ. ಅವರು ಬಡವರನ್ನು ದಾಳವಾಗಿ ಬಳಸಿಕೊಂಡು ಪಂಚಾಯಿತಿಯ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಪಡಿಸುತ್ತಿದ್ದಾರೆ,” ಎಂದು ಗಂಭೀರ ಆರೋಪ ಮಾಡಿದರು. ಅಲ್ಲದೆ ಆಗ್ರಹಿಸಿದರು.ಹಾಗೂ ಇದೇ ಸದಸ್ಯರು ಮುಳ್ಳೊಳ್ಳಿ ಗ್ರಾಮದಲ್ಲಿ ‌ಬಡ ವರ್ಗದವರು ಖಾಸಗಿ ಬ್ಯಾಂಕ, ಐ ಡಿ ಎಪ್ ಸಿ ಬ್ಯಾಂಕ ಇತರೆ ಬ್ಯಾಂಕ ನಲ್ಲಿ, ಸಾಲ ಸೂಲ ಮಾಡಿದ್ದಾರೆ. ಅಂತಹ ಬಡವರು ಸಹ ಇದ್ದಾರೆ‌. ಇವರಿಗೆ ಅನೂಕೂಲವಾಗ ಹಿತದೃಷ್ಟಿಯಿಂದ ಹಿಂತಹ ಕೆಲಸ ಮಾಡುತ್ತಿದ್ದೇವೆ ಎಂದು ಪತ್ರಿಕಾಗೋಷ್ಠಿಯಲ್ಲಿ ಶ್ರೀಕಾಂತ್ ಯಕ್ಕಣ್ಣವರ ಹೇಳಿದರು.

ಕೋಟ: ಪಿಡಿಒ ಪರಶುರಾಮ ರೋಗಣ್ಣವರ ಅವರು ಮಾತನಾಡಿ, ಪಂಚಾಯತ ರಾಜ್ ಆದೇಶದಂತೆ ಹೊಸ ಪಟ್ಟಾಬುಕ್ ವಿತರಣೆ ಮಾಡಲು ಕೆಲವ 1000 ರೂ ಇದ್ದು. ಅದನ್ನು ಮಾತ್ರ ತೆಗೆದುಕೊಳ್ಳಲು ಪಂಚಾಯತ ಆಡಳಿತ ಮಂಡಳಿಗೆ ತಿಳಿಸಿದ್ದೇನೆ. ಆದರೆ ಪಂಚಾಯತ ಆಡಳಿತ ಮಂಡಳಿಯವರು ಸಭೆ ಸೇರಿ ಠರಾವು ಪಾಸ ಮಾಡಿ‌, ಅದರಲ್ಲಿ 2000 ಹೆಚ್ಚುವಾರಿಯಾಗಿ ಮೂರು ಗ್ರಾಮಗಳ ಅಭಿವೃದ್ಧಿ ವಿಷಯಕ್ಕಾಗಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.
​ ​ ಪತ್ರಿಕಾಗೋಷ್ಠಿಯಲ್ಲಿ ಪಂಚಾಯಿತಿ ಸದಸ್ಯರಾದ ಶಿವಾನಂದ ಕುಸುಗಲ್, ಶೋಭಾ ರಾ ಪಟಗಾರ, ರವಿ ಕುಂಬಾರ, ಚನ್ನಪ್ಪ ಹೇಳ್ಳಿಕೇರಿ, ಮಹೇಶ ಅಣ್ಣಿಗೇರಿ, ಪಿರೋಜಿ ಆರೇರ, ಶಂಕ್ರಪ್ಪ ಗುಡೇನಕಟ್ಟಿ, ಈರಪ್ಪ ಹಾಗಲವಾಡಿ, ಸಿದ್ದು ಮಲಕಯ್ಯನವರ, ಈಶ್ವರಪ್ಪ ಕುಂದಗೋಳ, ಚನ್ನವಿರಯ್ಯ, ಮಲಕಯ್ಯನವರ, ಸೇರಿದಂತೆ ಇತರರು ಇದ್ದರು‌

ಪೋಟೋ:
ತಾಲ್ಲೂಕಿನ ಯರಗುಪ್ಪಿ ಗ್ರಾಮದ ಗ್ರಾಮ‌ ಪಂಚಾಯತಿಯಲ್ಲಿ ಹೊಸ ಮುಳ್ಳೊಳ್ಳಿ ಗ್ರಾಮದ ಪಟ್ಟಾ ಬುಕ್ ವಿತರಣೆ ಮಾಡಿರುವ ಸಮಸ್ಯೆ ಕುರಿತು ಪತ್ರಿಗೋಷ್ಠಿಯಲ್ಲಿ ಅಧ್ಯಕ್ಷ ಭೀಮಪ್ಪ ಮಾಯಣ್ಣವರ ಹಾಗೂ ಸದಸ್ಯ ಶ್ರೀಕಾಂತ ಯಕ್ಕಣ್ಣವರ ಮಾತನಾಡಿದರು.

Leave a Reply

Your email address will not be published. Required fields are marked *