​ಕುಂದಗೋಳ: ಶಾಸಕ ಎಂ.ಆರ್. ಪಾಟೀಲ್ ಜನ್ಮದಿನಾಚರಣೆ ಅಂಗವಾಗಿ ಉಚಿತ ಕಣ್ಣಿನ ತಪಾಸಣಾ ಶಿಬಿರ

Spread the love

ಕುಂದಗೋಳ: ಕ್ಷೇತ್ರದ ಜನಪ್ರಿಯ ಶಾಸಕ ಎಂ.ಆರ್. ಪಾಟೀಲ್ ಅವರ 64ನೇ ಹುಟ್ಟುಹಬ್ಬದ ನಿಮಿತ್ತ ಅವರ ಅಭಿಮಾನಿಗಳು ಹಾಗೂ ಕಾರ್ಯಕರ್ತರ ವತಿಯಿಂದ ಪಟ್ಟಣದಲ್ಲಿ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರವನ್ನು ಅತ್ಯಂತ ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿತ್ತು.

​ಈ ಶಿಬಿರದ ಉದ್ಘಾಟನೆಯನ್ನು ಶಾಸಕರ ಸಹೋದರ ಹಾಗೂ ಪ್ರಮುಖ ಮುಖಂಡ ಬಿ.ಆರ್. ಪಾಟೀಲ್ ನೆರವೇರಿಸಿದರು. ಇದಕ್ಕೂ ಮುನ್ನ ಶಾಸಕ ಎಂ.ಆರ್. ಪಾಟೀಲ್ ಅಭಿಮಾನಿ ಬಳಗದ ವತಿಯಿಂದ ತಾಲ್ಲೂಕು ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಜನ್ಮದಿನವನ್ನು ಆಚರಿಸಲಾಯಿತು.

​ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ತಾಲ್ಲೂಕು ಬಿಜೆಪಿ ಅಧ್ಯಕ್ಷ ನಾಗನಗೌಡ ಸಾತ್ಮರ ಮಾತನಾಡಿ, ಎಂ.ಆರ್. ಪಾಟೀಲ್ ಅವರು ಕಳೆದ 15 ವರ್ಷಗಳಿಂದ ನಿರಂತರವಾಗಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡು, ಎಲ್ಲಾ ವರ್ಗದ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಬಂದಿದ್ದಾರೆ. ಇಂದು ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಮೇಲೂ ತಾಲ್ಲೂಕಿನ ಶಿಕ್ಷಣ, ಆರೋಗ್ಯ ಮತ್ತು ಗ್ರಾಮೀಣ ಭಾಗದ ಸಮಗ್ರ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಅಂತಹ ಜನಸೇವಕ ಶಾಸಕರ ಹುಟ್ಟುಹಬ್ಬದ ಸಂದರ್ಭದಲ್ಲಿ ಅಭಿಮಾನಿಗಳು ಇಂತಹ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಹೆಮ್ಮೆಯ ವಿಷಯ ಎಂದು ಶ್ಲಾಘಿಸಿದರು.

​ಜಯ ಪ್ರಿಯ ಮೆಡಿಕಲ್ ಹಾಸ್ಪಿಟಲ್‌ನ ವೈದ್ಯ ಡಾ. ಕ್ರಾಂತಿ ಹಾಗೂ ತಂಡದವರು ಶಿಬಿರದಲ್ಲಿ ಪಾಲ್ಗೊಂಡಿದ್ದರು. ಶಿಬಿರದಲ್ಲಿ ತಾಲ್ಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಒಟ್ಟು 100 ಜನರು ಕಣ್ಣಿನ ತಪಾಸಣೆಗೆ ಒಳಪಟ್ಟಿದ್ದು, ಈ ಪೈಕಿ 40 ಜನರನ್ನು ಹೆಚ್ಚಿನ ಶಸ್ತ್ರಚಿಕಿತ್ಸೆಗಾಗಿ ಆಯ್ಕೆ ಮಾಡಲಾಯಿತು.

​ಈ ಸಂದರ್ಭದಲ್ಲಿ ಬಿ.ಆರ್. ಪಾಟೀಲ್, ಬಸವರಾಜ ಕೊಪ್ಪದ್, ಟಿ.ಜಿ. ಬಾಲಣ್ಣವರ, ಪೃಥ್ವಿರಾಜ್ ಕಾಳೆ, ನಾಗರಾಜ್ ದೇಶಪಾಂಡೆ, ರಾಜಣ್ಣ ಶಿವಳ್ಳಿ, ಶ್ರೀಕಾಂತ್ ಕಲಾಲ್, ಪ್ರಕಾಶ್ ಗೌಡ್ರು ಪಾಟೀಲ್, ಬಿ.ಟಿ. ಗಂಗಾಯಿ, ಡಿ.ವೈ. ಲಕ್ಕನ್ ಗೌಡ, ಪ್ರಕಾಶ್ ಕುಬಿಹಾಳ, ಗಣೇಶ್ ಕೊಕ್ಕಾಟೆ, ವಾಸು ಗಂಗಾಯಿ, ವಾಗೇಶ್ ಮನಕಟ್ಟಿಮಠ, ಬಸವರಾಜು ನವಳ್ಳಿ, ಬಸವರಾಜ್ ಕೋಳಿವಾಡ, ಶಶಿ ಸಣ್ಣ ಲಿಂಗಣ್ಣವರ್, ಎಲ್ಲಪ್ಪ ಡೊಳ್ಳಿನ, ಮಂಜುನಾಥ ಕಂಬಳಿ, ಮಂಜುನಾಥ ಬಂಡಿವಾಡ, ಬಸವರಾಜ್ ಚಿಕ್ಕಹರಕುನಿ, ಸತೀಶ್ ಪಾಟೀಲ್, ಫಕೀರಯ್ಯ ಎತ್ತಿನಮಠ, ಸಿದ್ದು ಧಾರವಾಡ ಶೆಟ್ಟರ್, ಉಮೇಶ್ ಗದಗಿನ, ಪ್ರದೀಪ್ ಕಾಳೆ, ರಮೇಶ್ ಗದಗಿನ, ರಮೇಶ್ ಮೇಲಮಾಳ್ಗಿ, ಸಂತೋಷ ಮಲಿಗ್ವಾಡ್, ನಿಖಿಲ್ ಗಂಗಾಯಿ, ಆಸ್ಪತ್ರೆಯ ಮ್ಯಾನೇಜರ್ ಬಸವರಾಜ್ ಹೂಗಾರ್ ಹಾಗೂ ಸಿಬ್ಬಂದಿ ವರ್ಗದವರು, ನೂರಾರು ಕಾರ್ಯಕರ್ತರು ಮತ್ತು ಪಟ್ಟಣದ ನಾಗರಿಕರು ಉಪಸ್ಥಿತರಿದ್ದರು.

 

 

Leave a Reply

Your email address will not be published. Required fields are marked *