

ಕುಂದಗೋಳ: ಗರ್ಭಿಣಿಯಾದಾಗ ಮಹಿಳೆಯರು ಅನುಭವಿಸುವ ನೋವು ಮತ್ತು ದೈಹಿಕ ಬದಲಾವಣೆಗಳು ನಿಜಕ್ಕೂ ಪುನರ್ಜನ್ಮಕ್ಕೆ ಸಮ ಎಂದು ಸಿವಿಲ್ ನ್ಯಾಯಾಧೀಶರು ಹಾಗೂ ತಾಲ್ಲೂಕು ಕಾನೂನು ಸೇವೆಗಳ ಸಮಿತಿಯ ಕುಂದಗೋಳ ಘಟಕದ ಸದಸ್ಯರಾದ ಶ್ರೀ ಮತಿ ಗಾಯತ್ರಿ ಅವರು ಹೇಳಿದರು.
ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ಸಿಡಿಪಿಓ ಕಚೇರಿಯಲ್ಲಿ ನಡೆದ ವಿಶ್ವ ಪೌಷ್ಟಿಕಾಂಶ ದಿನಾಚರಣೆಯ ಕಾರ್ಯಕ್ರಮದಲ್ಲಿ
ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಹೆಣ್ಣು ಮಕ್ಕಳಿಗೆ “ನಾರ್ಮಲ್ ಸ್ಥಿತಿಯಲ್ಲಿ ದೇಹದ ಅಂಗಾಂಗಗಳು ಅವುಗಳ ಸ್ಥಾನದಲ್ಲಿರುತ್ತವೆ. ಆದರೆ ಗರ್ಭಿಣಿಯಾದಾಗ, ಇನ್ನೊಂದು ಜೀವ ದೇಹದೊಳಗೆ ಬೆಳೆಯುತ್ತಿರುವುದರಿಂದ ದೇಹದ ಭಾಗಗಳು ಸಡಿಲಗೊಂಡು ಸ್ಥಾನಪಲ್ಲಟವಾಗುತ್ತವೆ. ಈ ಬದಲಾವಣೆಯ ನೋವು ಗರ್ಭಾವಸ್ಥೆಯಲ್ಲಿ ಅರಿವಿಗೆ ಬರುವುದಿಲ್ಲ, ಆದರೆ ಹೆರಿಗೆಯಾದ ನಂತರ ಅದರ ಪರಿಣಾಮ ಗೊತ್ತಾಗುತ್ತದೆ. ಒಂದು ಮಗುವಿಗೆ ಜನ್ಮ ನೀಡಲು ಹೆಣ್ಣು ಎಷ್ಟು ಕಷ್ಟಗಳನ್ನು ನುಂಗಿ, ಅನುಭವಿಸುತ್ತಾಳೆ ಎಂಬುದನ್ನು ತಿಳಿಯಬೇಕು. ಈ ಕಾರಣದಿಂದಲೇ ಹೆರಿಗೆ ಹೆಣ್ಣಿಗೆ ಪುನರ್ಜನ್ಮಕ್ಕೆ ಸಮ” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಿಡಿಪಿಒ ಉಮಾ ಬಳ್ಳೊಳ್ಳಿ, ವಕೀಲರಾದ ಬಿ.ಸಿ. ಪಾಟೀಲ, ವೈ.ಬಿ. ಬಿಳೇಬಾಳ, ಚಂದ್ರಕಲಾ ಪ್ರಭಾಕರ್, ಗೀತಾ ಜಿ., ಎಸ್.ಎಸ್. ತೊಂಡುರ, ಅಶೋಕ ಕ್ಯಾರಕಟ್ಟಿ, ವೈ.ಎಂ. ತಹಶಿಲ್ದಾರ ಹಾಗೂ ಶಿಶು ಅಭಿವೃದ್ಧಿ ಯೋಜನಾ ಇಲಾಖೆಯ ಅಧಿಕಾರಿಗಳಾದ ಶಮಶಾದಬೇಗಂ ನಧಾಪ್, ದೇವರಾಜ ರೋಟ್ಟಿಗವಾಡ, ಯಲ್ಲಮ್ಮ ಭಜಂತ್ರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

