ಶಿಕ್ಷಕರು ವಿದ್ಯಾರ್ಥಿಗಳ ಬದುಕನ್ನು ರೂಪಿಸುವ ಶಿಲ್ಪಿಗಳು: ಶಾಸಕ ಎಂ ಆರ್ ಪಾಟೀಲ

Spread the love

ಕುಂದಗೋಳ: ಶಿಕ್ಷಕರು ಕೇವಲ ಪಾಠ ಹೇಳುವ ಯಂತ್ರಗಳಲ್ಲ, ಬದಲಾಗಿ ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯ, ಶಿಸ್ತು ಮತ್ತು ಗೌರವವನ್ನು ತುಂಬುವ ಶಿಲ್ಪಿಗಳು ಎಂದು ಶಾಸಕ ಎಂ.ಆರ್. ಪಾಟೀಲ್ ಹೇಳಿದರು. ಪಟ್ಟಣದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಗುರುಗಳ ಪಾತ್ರವನ್ನು ಸ್ಮರಿಸಿದರು.

ಅವರು ಪಟ್ಟಣದಲ್ಲಿ ಜಿಲ್ಲಾ ಪಂಚಾಯತ ಹಾಗೂ ಶಾಲಾ ಶಿಕ್ಷಣ ಇಲಾಖೆ ಧಾರವಾಡ ಹಾಗೂ ಶಿಕ್ಷಕ ದಿನೋತ್ಸವ ಸಮೀತಿ ಕುಂದಗೋಳ ಇವರ ಸಂಯುಕ್ತ ಆಶ್ರಯದೊಂದಿಗೆ ಶ್ರೀ ಗುರುದೇವ ಪ್ರೌಡ ಶಾಲೆ ಆವರಣದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಅಂಗವಾಗಿ ಆಯೋಜಿಸಲಾದ ಶಿಕ್ಷಕರ ದಿನಾಚಾರಣೆ ಸಮಾರಂಭದಲ್ಲಿ ಶಾಸಕ ಎಂ ಆರ್ ಪಾಟೀಲ್ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡು, “ಇಂದು ನಾನು ಶಾಸಕನಾಗಿ ನಿಂತಿರುವುದು ನನ್ನ ಗುರುಗಳ ಮಾರ್ಗದರ್ಶನದ ಫಲ. ಹಿಂದೆ ಶಿಕ್ಷಕರು ವಿದ್ಯಾರ್ಥಿಗಳನ್ನು ತಿದ್ದಿದಾಗ ಪೋಷಕರು ಅದನ್ನು ಪ್ರೋತ್ಸಾಹಿಸುತ್ತಿದ್ದರು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಸಮಾಜವು ಶಿಕ್ಷಕರಿಗೆ ಮುಕ್ತವಾಗಿ ಬೋಧಿಸಲು ಸಹಕಾರ ನೀಡಬೇಕು,” ಎಂದು ಕರೆ ನೀಡಿದರು.

ಗುರುಭವನದ ಸಮಸ್ಯೆ ಬಗೆಹರಿಸುವ ಭರವಸೆ
ಕುಂದಗೋಳದಲ್ಲಿ ನಿರ್ಮಾಣವಾಗುತ್ತಿರುವ ಗುರುಭವನದ ಕುರಿತು ಶಾಸಕರು ಪ್ರಸ್ತಾಪಿಸಿ, “ತಗ್ಗು ಪ್ರದೇಶದಲ್ಲಿರುವ ಕಾರಣ ನೀರಿನ ಸಮಸ್ಯೆಯಿಂದ ಹಿನ್ನಡೆ ಉಂಟಾಗಿದೆ. ಇದನ್ನು ಶಾಶ್ವತವಾಗಿ ಬಗೆಹರಿಸಲು ಈಗಾಗಲೇ ಒಂದು ಕೋಟಿ ರೂಪಾಯಿ ಮೀಸಲಿಡಲಾಗಿದೆ. ಶಿಕ್ಷಕರಿಗೆ ಸುಸಜ್ಜಿತ ಕಟ್ಟಡದ ಅವಶ್ಯಕತೆ ಇದೆ. ಶೀಘ್ರದಲ್ಲೇ ತಾಂತ್ರಿಕ ತಜ್ಞರ ಸಲಹೆ ಪಡೆದು ಪರಿಹಾರ ಕಂಡುಕೊಳ್ಳುತ್ತೇವೆ,” ಎಂದು ಭರವಸೆ ನೀಡಿದರು.

ನಿವೃತ್ತ ಹಾಗೂ ಉತ್ತಮ ಶಿಕ್ಷಕರಿಗೆ ಗೌರವ
ಈ ಸಂದರ್ಭದಲ್ಲಿ ನಿವೃತ್ತ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಾದ ಎಸ್.ಎಸ್. ಹುಟಗೀಕರ, ಪಿ.ಎನ್. ಮಡಿವಾಳರ, ಎಂ.ಎಸ್. ಬೊಮ್ಮನಗೌಡ್ರ, ಜೆ.ಸಿ. ಜಲಪೂರ ಸೇರಿದಂತೆ ಅನೇಕರಿಗೆ ಸನ್ಮಾನ ಸಲ್ಲಿಸಲಾಯಿತು. ಜೊತೆಗೆ, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರಾದ ಸುಜಾತಾ ಪಾಳೇದ, ಡಿ.ಬಿ. ದೊಡಮನಿ ಹಾಗೂ ತಾಲ್ಲೂಕಿನ ಉತ್ತಮ ದೈಹಿಕ ಶಿಕ್ಷಕರಾದ ಆನಂದ ಸಂಗಟ ಮತ್ತು ವೈ.ಜೆ. ಚೌಹಾನ ಅವರನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಉತ್ತಮ ಶಾಲೆಗಳ ಘೋಷಣೆ
2025-26ನೇ ಸಾಲಿನ ಉತ್ತಮ ಶಾಲಾ ಪ್ರಶಸ್ತಿಗೆ ಇಂಗಳಗಿಯ ಸರ್ಕಾರಿ ಹೆಣ್ಣುಮಕ್ಕಳ ಕಿರಿಯ ಪ್ರಾಥಮಿಕ ಶಾಲೆ, ಸಂಕ್ಲಿಪೂರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ರಾಮನಕೊಪ್ಪದ ಸರ್ಕಾರಿ ಪ್ರೌಢ ಶಾಲೆ ಆಯ್ಕೆಯಾಗಿದ್ದು, ಕ್ರಮವಾಗಿ ಮುಖ್ಯ ಶಿಕ್ಷಕರುಗಳಾದ ಎಸ್.ಸಿ. ಸಂಗಣ್ಣವರ, ಎಂ.ಬಿ. ರಾಯನಗೌಡ್ರ ಮತ್ತು ಎಚ್.ಆರ್. ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು.

ಉತ್ತಮ ಶಿಕ್ಷಕರ ಪಟ್ಟಿ ಪ್ರಕಟ
ತಾಲ್ಲೂಕು ಮಟ್ಟದಲ್ಲಿ ಪ್ರಾಥಮಿಕ ವಿಭಾಗದಲ್ಲಿ ಮಮತಾ ಎಂ. ಚಿನ್ನಪ್ಪಗೌಡ್ರ, ಎ.ಬಿ. ಬಳ್ಳಾರಿ, ಎಂ.ಎಚ್. ಬಾರಕೇರ, ಎಸ್.ಕೆ. ಹೂಗಾರ, ಎಸ್.ಎನ್. ಕೆರೂರ, ಕವಿತಾ ಸಾಂಗೋಲಿ, ಕೆ.ಐ. ಕಾಜಗಾರ, ಜಿ.ಬಿ. ಕಿಡಿಯಪನವರ, ಎಸ್.ಎಲ್. ಕುರಿ, ಲತಾ ಪಟಗಾರ, ಸಿ.ಎ. ಪಾಟೀಲ, ಶಿಲ್ಪಾ ಸನ್ನಿಯವರ ಹಾಗೂ ಅನುದಾನಿತ ವಿಭಾಗದಲ್ಲಿ ಬಿ.ಪಿ. ಗಳಗನಾಥ, ಅನುದಾನರಹಿತ ವಿಭಾಗದಲ್ಲಿ ಗುರುಸ್ವಾಮಿ ಬಾಳಿಹಳ್ಳಿಮಠ ಮತ್ತು ಜಿ.ಎಚ್. ಮುಳ್ಕೊಳ್ಳಿ ಅವರು ಪ್ರಶಸ್ತಿ ಪಡೆದರು. ಪ್ರೌಢಶಾಲಾ ವಿಭಾಗದಲ್ಲಿ ಕನ್ನಡ ವಿಷಯಕ್ಕೆ ಎಸ್.ಎಸ್. ಹುಣಶೀಮರದ, ಇಂಗ್ಲೀಷ್‌ಗೆ ಎಂ.ವಿ. ಲೆಂಕಣ್ಣವರ, ಗಣಿತಕ್ಕೆ ಸುಮನ ಅಣೇಕರ, ವಿಜ್ಞಾನಕ್ಕೆ ಅನುರಾಧ, ಸಮಾಜ ವಿಜ್ಞಾನಕ್ಕೆ ಆರ್.ಬಿ. ಹುಡೇದ, ಚಿತ್ರಕಲೆಗೆ ಶಿವಾನಂದ ಜಠಾರ ಮತ್ತು ಹೆಗ್ಗಪ್ಪ ಲಮಾಣಿ, ಟಿ.ಜಿ.ಟಿ. ವಿಭಾಗಕ್ಕೆ ಎಸ್.ಎಂ. ಬಾಚಲಾಪೂರ, ಉರ್ದು ವಿಭಾಗಕ್ಕೆ ಎಸ್.ಎಸ್. ಬಗಲಿ ಮತ್ತು ಸಿ.ಬಿ.ಝಡ್ ವಿಭಾಗಕ್ಕೆ ಐ.ಡಿ. ಬಳ್ಳಾರಿ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಇದಕ್ಕೂ ಮುನ್ನ ನಿವೃತ್ತ ಶಾಲಾ ಶಿಕ್ಷಕರಿಗೂ ಸನ್ಮಾನಿಸಿ ಗೌರವಿಸಲಾಯಿತು

ಕಾರ್ಯಕ್ರಮದಲ್ಲಿ ಕಲ್ಯಾಣಪುರ ಮಠದ ಶ್ರೀ ಅಭಿನವ ಬಸವಣ್ಣಜ್ಜನವರು ಹಾಗೂ ಶಿವಾನಂದ ಮಠದ ಶ್ರೀ ಶಿವಾನಂದ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.

ಈ ಸಂದರ್ಭದಲ್ಲಿ ಬಿಇಒ ಮಾಹದೇವಿ ಮಾಡಲಗೇರಿ, ಗ್ಯಾರಂಟಿ ಯೋಜನೆ ತಾಲ್ಲೂಕು ಅಧ್ಯಕ್ಷ ಶಿವಾನಂದ ಬೆಂತೂರ, ಸಂಶಿ ಕೆ ಎಲ್ ಇ ಸಂಸ್ಥೆಯ ಸ್ಥಾನಿಕ ಆಡಳಿತ ಮಂಡಳಿಯ ಅಧ್ಯಕ್ಷರಾದ ಎ ಬಿ ಉಪ್ಪಿನ, ಗಾಂಧಿ ವಿದ್ಯಾಪೀಠ ಸಂಸ್ಥೆಯ ಅಧ್ಯಕ್ಷ ಎಫ್.ಕೆ. ಬಾಳಿಹಳ್ಳಿಮಠ, ಕುಂದಗೋಳ ತಾಲೂಕಿನ ನೌಕರರ ಸಂಘದ ಅಧ್ಯಕ್ಷ ಮುತ್ತಣ್ಣ ಅಣ್ಣಿಗೇರಿ, ಶಿಕ್ಷಕರಾದ ನಾಗರಾಜ ಗೌಳಿ, ಮಾಲತೇಶ ಶ್ಯಾಗೋಟಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಪೋಟೋ: 01
ಪಟ್ಟಣದ ಶ್ರೀ ಗುರುದೇವ ಪ್ರೌಢಶಾಲಾ ಆವರಣದಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಶಾಸಕ ಎಂ ಆರ್ ಪಾಟೀಲ ಸೇರಿದಂತೆ ವಿವಿಧ ಗಣ್ಯ ದೀಪ ಬೆಳಗಿಸುವದರ ಮೂಲಕ ಚಾಲನೆ ನೀಡಿ ಮಾತನಾಡಿದರು.

ಪೋಟೋ: 01 A

ಪಟ್ಟಣದ ಶ್ರೀ ಗುರುದೇವ ಪ್ರೌಢಶಾಲಾ ಆವರಣದಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಶಾಸಕ ಎಂ ಆರ್ ಪಾಟೀಲ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Leave a Reply

Your email address will not be published. Required fields are marked *