ಎಐಸಿಸಿ ಕೋ ಆರ್ಡಿನೇಟರ್ ಶಿವಾನಂದ ಪಾಚಂಗಿ ಅವರಿಗೆ ಶಾಸಕ ಕೋನರಡ್ಡಿ ಸನ್ಮಾನ

Spread the love

​ನವಲಗುಂದ: ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (AICC) ನ್ಯಾಷನಲ್ ಸೋಷಿಯಲ್ ಡೆಮಾಕ್ರಟಿಕ್ ಅಲಾಯನ್ಸ್‌ (National Social Democratic Alliance – NSDA) ನ ಕೋ ಆರ್ಡಿನೇಟರ್‌ ಆಗಿ ನೇಮಕಗೊಂಡಿರುವ ಶ್ರೀ ಶಿವಾನಂದ ಪಾಚಂಗಿ ಅವರನ್ನು ನವಲಗುಂದ ಶಾಸಕರಾದ ಮಾನ್ಯ ಶ್ರೀ ಎನ್.ಎಚ್. ಕೋನರಡ್ಡಿಯವರು ಕಾಂಗ್ರೆಸ್‌ ಪಕ್ಷದ ಕಾರ್ಯಾಲಯದಲ್ಲಿ ಸನ್ಮಾನಿಸಿ ಅಭಿನಂದಿಸಿದರು.

​ಶಿವಾನಂದ ಪಾಚಂಗಿ ಅವರು ಕಳೆದ ನಾಲ್ಕು ದಶಕಗಳಿಂದ ಪಕ್ಷದ ಹಿರಿಯ ಸಕ್ರಿಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಕೆಪಿಸಿಸಿ ಒಬಿಸಿ ಘಟಕದ ರಾಜ್ಯ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಇದೀಗ ಎಐಸಿಸಿ ಕೋ ಆರ್ಡಿನೇಟರ್ ಆಗಿ ನೇಮಕವಾಗಿದ್ದಕ್ಕಾಗಿ ಶಾಸಕರು ಅಭಿನಂದನೆ ಸಲ್ಲಿಸಿದರು.

​ಇದೇ ಸಂದರ್ಭದಲ್ಲಿ, ಶ್ರೀ ಪಾಚಂಗಿಯವರು ಧಾರವಾಡ ಹಾಗೂ ಗದಗ ಜಿಲ್ಲೆಗಳ ವಿಧಾನಸಭಾ ಕ್ಷೇತ್ರಗಳ ಉಸ್ತುವಾರಿ ಆಗಿದ್ದರಿಂದ, ಮಾನ್ಯ ಶಾಸಕರು ಅವರ ಪಕ್ಷನಿಷ್ಠೆ ಮತ್ತು ಪರಿಶ್ರಮವನ್ನು ಶ್ಲಾಘಿಸಿದರು.

​ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ವರ್ಧಮಾನ ಗೌಡರ, ಶ್ರೀ ವಿಜಯಪ್ಪ ಗೌಡ ಪಾಟೀಲ, ಪುರಸಭೆ ಅಧ್ಯಕ್ಷರಾದ ಶ್ರೀ ಶಿವಾನಂದ ತಡಸಿ, ಶ್ರೀ ಅಪ್ಪಣ್ಣ ಹಳ್ಳದ, ಮಂಜುನಾಥ ಜಾಧವ, ಜೀವನ ಪವಾರ, ರಾಜು ದೊಡ್ಡಮನಿ, ಕಿರಣ ಉಳ್ಳಿಗೇರಿ, ಎಂ.ಎಂ. ಮುಲ್ಲಾ, ಕಿರಣ ಕಲಾಲ ಸೇರಿದಂತೆ ಅನೇಕ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *