
ಕುಂದಗೋಳ: ತಾಲ್ಲೂಕಿನ ರೊಟ್ಟಿಗವಾಡ ಗ್ರಾಮದ ಜಿ.ಕೆ. ಹಿರೇಗೌಡರ ಪ್ರೌಢಶಾಲೆಯ ವಿದ್ಯಾರ್ಥಿಗಳು ತಾಲೂಕು ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕಳೆದ ಆ 28ರಂದು ನಡೆದ 17 ವರ್ಷ ವಯೋಮಿತಿಯ ಶಾಲಾ ಕ್ರೀಡಾಕೂಟದಲ್ಲಿ ಶಾಲೆಯ ಬಾಲಕರು ಹಾಗೂ ಬಾಲಕಿಯರ ತಂಡಗಳು ವಿಜಯ ಸಾಧಿಸುವ ಮೂಲಕ ಧಾರವಾಡ ಜಿಲ್ಲಾ ಮಟ್ಟಕ್ಕೆ ಪ್ರವೇಶ ಪಡೆದಿವೆ. ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ಸಮಿತಿ ಅಧ್ಯಕ್ಷರಾದ ಗಿರೀಶ ಜಿ. ಪಾಟೀಲ, ಆಡಳಿತ ಮಂಡಳಿ ಸದಸ್ಯರು, ಮುಖ್ಯೋಪಾಧ್ಯಾಯ ವಿನಯಕುಮಾರ ಕಬನೂರ, ದೈಹಿಕ ಶಿಕ್ಷಣ ಶಿಕ್ಷಕ ಮಲ್ಲಪ್ಪ ಕೋರಿ ಸೇರಿದಂತೆ ಶಿಕ್ಷಕರಾದ ಬಸವರಾಜ ಸೊರಟೂರ, ರಾಮಕೃಷ್ಣ ರಾಮಗಿರಿ, ಬಾನುಮತಿ ಕುಸಗೂರ, ಕುಬೇರಗೌಡ ಹಿರೇಗೌಡ, ಗಣೇಶ ಬ್ಯಾಲಹುಣಸಿ, ರವಿರಾಜ ನಾಯಕ ಮತ್ತು ವಿಠಲ್ ಬೆಳ್ಳಗಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕ ವರ್ಗವು ಆಯ್ಕೆಯಾದ ಎಲ್ಲ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಜಿಲ್ಲಾ ಮಟ್ಟದ ಪಂದ್ಯಾವಳಿಗೆ ಶುಭ ಹಾರೈಸಿದೆ.


Fine article sir thanks a lot for publishing local articles as early as possible and encouraging the sports 🙏💐💐🙏🙏