ಹರಲಾಪೂರ: ಯೋಗಾಸನದಲ್ಲಿ ಕಂಚು, ಅನನ್ಯಗೆ ರಾಜ್ಯ ಸರ್ಕಾರದ ಗೌರವ

Spread the love

ಕುಂದಗೋಳ: ತಾಲ್ಲೂಕಿನ ಹರಲಾಪುರ ಗ್ರಾಮದ ಅನನ್ಯ ಸಾಂಬಯ್ಯ ಹಿರೇಮಠ ಅವರು ಉತ್ತರಾಖಂಡದಲ್ಲಿ ನಡೆದ 38ನೇ ರಾಷ್ಟ್ರಮಟ್ಟದ ಒಲಿಂಪಿಕ್ ಯೋಗಾಸನ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಕರ್ನಾಟಕಕ್ಕೆ ಕೀರ್ತಿ ತಂದಿದ್ದಾರೆ.

ಇವರ ಸಾಧನೆಯನ್ನು ಗುರುತಿಸಿ ಕರ್ನಾಟಕ ಸರ್ಕಾರವು ಕ್ರೀಡಾ ದಿನಾಚರಣೆಯ ಅಂಗವಾಗಿ ಬೆಂಗಳೂರಿನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಯುವನಿಕಾದಲ್ಲಿ ಸ್ಥಳದಲ್ಲಿ ಗೌರವಿಸಿದೆ.

ಮುಖ್ಯಮಂತ್ರಿಗಳ ಅಭಿನಂದನಾ ಪತ್ರದೊಂದಿಗೆ ಎರಡು ಲಕ್ಷ ರೂಪಾಯಿ ನಗದನ್ನು ಅನನ್ಯ ಅವರಿಗೆ ನೀಡಿ ಸನ್ಮಾನಿಸಲಾಯಿತು.
ಈ ಗೌರವವು ಅನನ್ಯ ಅವರ ಶ್ರಮಕ್ಕೆ ಸಿಕ್ಕ ಪ್ರತಿಫಲವಾಗಿದೆ ಎಂದು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಸರ್ಕಾರದ ಪರವಾಗಿ ವಿಧಾನ ಪರಿಷತ್ ಸದಸ್ಯರಾದ ಕೆ. ಗೋವಿಂದರಾಜು ಮತ್ತು ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತರಾದ ಚೇತನ್ ಆರ್. (ಐಪಿಎಸ್) ಅವರು ಅನನ್ಯ ಅವರನ್ನು ಗೌರವಿಸಿದರು.

Leave a Reply

Your email address will not be published. Required fields are marked *