

ಹುಬ್ಬಳ್ಳಿಯ ಐಬಿಎಮ್ಆರ್ ಸಂಸ್ಥೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ: ವೀರಯೋಧ ರವಿ ರೋಡೆ ಅವರಿಂದ ದೇಶಪ್ರೇಮದ ಕರೆ
ಹುಬ್ಬಳ್ಳಿ: ನಗರದ ಪ್ರತಿಷ್ಠಿತ ಐಬಿಎಮ್ಆರ್ ಸಂಸ್ಥೆಯ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ವೈಭವದಿಂದ ಆಚರಿಸಲಾಯಿತು. ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಮತ್ತು ಶಿಸ್ತಿನ ಮೌಲ್ಯಗಳನ್ನು ತುಂಬುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವೀರಯೋಧ ಶ್ರೀ ರವಿ ರೋಡೆ ಅವರು, ವಿದ್ಯಾರ್ಥಿಗಳಿಗೆ ಶ್ರದ್ಧೆ, ದೇಶಪ್ರೇಮ, ತ್ಯಾಗ, ಮತ್ತು ಮಾತೃ-ಪಿತೃ ಗೌರವದ ಕುರಿತು ಮನಮುಟ್ಟುವಂತೆ ಮಾತನಾಡಿದರು. “ಭಾರತ ಒಂದು ಭಾವೈಕ್ಯತೆಯ ದೇಶವಾಗಿದ್ದು, ನಾವೆಲ್ಲರೂ ದೇಶಕ್ಕಾಗಿ ಸದಾ ಸಿದ್ಧರಿರಬೇಕು” ಎಂಬ ಸಂದೇಶವನ್ನು ನೀಡುವ ಮೂಲಕ ಯುವಕರಿಗೆ ಸ್ಪೂರ್ತಿ ತುಂಬಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಂಸ್ಥಾಪಕ ಶ್ರೀ ವಿನಯ್ ಚಂದ್ರ ಮಹೇಂದ್ರಕರ್ ಅವರು, ಇಂದಿನ ಯುವಜನತೆ ದೇಶದ ಪ್ರಗತಿಗಾಗಿ ಮತ್ತು ದೂರದೃಷ್ಟಿಯ ವಿಚಾರಗಳಿಗಾಗಿ ತಂತ್ರಜ್ಞಾನ ಹಾಗೂ ಶೈಕ್ಷಣಿಕ ಬೆಳವಣಿಗೆಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಂಗವಾಗಿ ಸಾಂಸ್ಕೃತಿಕ, ಕಲಾ, ಸಂಸ್ಕೃತಿ ಮತ್ತು ಎನ್‌ಎಸ್‌ಎಸ್ ವಿಭಾಗದ ವತಿಯಿಂದ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರಾದ ಎಂ.ಎಸ್. ಬಿರಾದಾರ್, ಸುಮಂತ್ ಬಿ. ಸುಜೇಂದ್ರ, ರೇಖಾ ಮಹೇಂದ್ರಕರ್, ಪ್ರದೀಪ್ ಶರ್ಮಾ, ಡಾ. ಅರುಣ್ ಶೆಟ್ಟಿ, ನದಾಫ್, ಡಾ. ವಿಕ್ರಮ್ ಕುಲಕರ್ಣಿ, ರವಿ ಕಬ್ಬಿಣದ, ಸಮೀರ್ ಗುಡಿ, ಯುನಸ್, ರೋಹನ್, ವಿವೇಕ್, ದೈಹಿಕ ಶಿಕ್ಷಕ ಪ್ರಕಾಶ್ ಶೆಟ್ಟರ್, ಹಾಗೂ ಎಲ್ಲಾ ವಿಭಾಗದ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಪದವಿ ಪೂರ್ವ ಪ್ರಾಂಶುಪಾಲರಾದ ನಜೀಮ್ ಅವರು ವಂದನಾರ್ಪಣೆ ಮಾಡಿದರು. ಕಾರ್ಯಕ್ರಮವನ್ನು ಅಣ್ಣಪ್ಪ ಕೊರವರ ಅವರು ನಿರೂಪಿಸಿದರು.

