ಯಾವುದೇ ಶುಭಕಾರ್ಯ ವಿಶ್ವಕರ್ಮ ಸಮಾಜದಿಂದ ಪ್ರಾರಂಭ: ಶಾಸಕ ಎಂ.ಆರ್.ಪಾಟೀಲ

Spread the love

ಕುಂದಗೋಳ: ಯಾವುದೇ ಶುಭ ಕಾರ್ಯಗಳು ವಿಶ್ವಕರ್ಮ ಸಮುದಾಯದಿಂದಲೇ ಪ್ರಾರಂಭವಾಗುತ್ತವೆ ಎಂದು ಶಾಸಕ ಎಂ.ಆರ್. ಪಾಟೀಲ ಅವರು ಹೇಳಿದರು.

ಅವರು ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ನಡೆದ ಭಗವಾನ್ ಶ್ರೀ ವಿಶ್ವಕರ್ಮ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿಶ್ವಕರ್ಮ ಸಮುದಾಯದವರು ಶ್ರಮಜೀವಿಗಳು ಮತ್ತು ‘ಕಾಯಕವೇ ಕೈಲಾಸ’ ತತ್ವಕ್ಕೆ ಬದ್ಧರಾಗಿದ್ದಾರೆ. ಅವರು ತಮ್ಮ ಕಾಯಕದಿಂದಲೇ ಜೀವನ ಕಂಡುಕೊಂಡವರು ಎಂದು ಶಾಸಕರು ಶ್ಲಾಘಿಸಿದರು.

ನಂತರ ತಹಶೀಲ್ದಾರ್ ರಾಜು ಮಾವರಕರ್ ಮಾತನಾಡಿ, ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ವಿಶ್ವಕರ್ಮ ಸಮುದಾಯದ ಕೊಡುಗೆ ಅಪಾರವಾಗಿದೆ. ಬೇಲೂರು, ಹಳೇಬೀಡು ಸೇರಿದಂತೆ ದೇಶಾದ್ಯಂತ ಇರುವ ಐತಿಹಾಸಿಕ ಕೆತ್ತನೆಗಳು ಮತ್ತು ಶಿಲ್ಪಕಲೆಗಳು ವಿಶ್ವಕರ್ಮರ ಶ್ರಮದ ಫಲವಾಗಿವೆ ಎಂದು ತಿಳಿಸಿದರು.

ಈ ಸಮಯದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ವಿಶ್ವ ಕರ್ಮ ಸಮಾಜದ ಮುಖಂಡರಿಗೆ ಸನ್ಮಾನಿಸಿ ಗೌರವಿಸಲಾಯಿತು. ಶಿಕ್ಷಕ ಎಸ್.ಸಿ. ಶ್ಯಾನವಾಡ ಅವರು ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಇಒ ಜಗದೀಶ್ ಕಮ್ಮಾರ, ಮಾಲತೇಶ ಶ್ಯಾಗೋಟಿ, ವೀಣಾ ಆನಿ, ಈರಣ್ಣ ಕಲಕುಟಕರ, ಎಂ.ಕೆ. ಬಡಿಗೇರ, ಮಾಲತೇಶ ಬಡಿಗೇರ, ಸುವರ್ಣ ಮಡ್ಲಿ, ಬಸಪ್ಪ ರಾಮಜಿ, ರಾಜು ಬಡಿಗೇರ, ಮಂಜು ಚಿಕ್ಕನೇರ್ತಿ, ಸಂತೋಷ ಬಡಿಗೇರ, ಬಸವರಾಜ ಬಡಿಗೇರ, ಪ್ರಕಾಶ ಬಡಿಗೇರ, ಜಿ ಬಿ ಪತ್ತಾರ, ಸಕ್ರಪ್ಪ ಬಡಿಗೇರ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *