
ನವಲಗುಂದ: ಮಹರ್ಷಿ ವಾಲ್ಮೀಕಿ ಅವರು ತಮ್ಮ ಜೀವನದಲ್ಲಿ ಆದ ಮಹತ್ತರ ಪರಿವರ್ತನೆಯಿಂದಾಗಿ ರಾಮಾಯಣದಂತಹ ಮಹಾಕಾವ್ಯವನ್ನು ಸಂಸ್ಕೃತದಲ್ಲಿ ರಚಿಸಿ ‘ಆದಿಕವಿ’ ಎಂಬ ಬಿರುದನ್ನು ಪಡೆದು, ಬದುಕಿನ ಶ್ರೇಷ್ಠತೆಯನ್ನು ಇಡೀ ವಿಶ್ವಕ್ಕೆ ಸಾರಿದರು ಎಂದು ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ಮುಖ್ಯಸ್ಥರಾದ ಶ್ರೀಧರ ಲೋನಕರ ಹೇಳಿದರು.
ಅವರು ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ತಪ್ಪು ದಾರಿಯಿಂದ ಸತ್ಯ, ಧರ್ಮದತ್ತ ಸಾಗಿದ ವಾಲ್ಮೀಕಿ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲರಾದ ಡಾ. ಎಂ. ಬಿ. ಬಾಗಡಿ, “ಮಹರ್ಷಿ ವಾಲ್ಮೀಕಿಯವರು ಜಗತ್ತಿಗೆ ರಾಮಾಯಣದಂತಹ ಮಹಾಕಾವ್ಯ ಕೊಟ್ಟ ಮಹಾತ್ಮರು. ಅವರು ತಮ್ಮ ಜೀವನದಲ್ಲಿ ತಪ್ಪು ದಾರಿ ತುಳಿದರೂ, ನಂತರ ಪರಿವರ್ತನೆಗೊಂಡು ಸಮಾಜದಲ್ಲಿ ಸತ್ಯ, ಧರ್ಮ ಮತ್ತು ನೀತಿಯ ಮೌಲ್ಯಗಳನ್ನು ಬೆಳೆಯುವಂತೆ ಪ್ರೇರೇಪಿಸಿದರು” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಎಲ್ಲ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಮಹರ್ಷಿ ವಾಲ್ಮೀಕಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ಅರ್ಪಣೆ ಮಾಡಿದರು.
ಐಕ್ಯೂಎಸಿ (IQAC) ಸಹ ಸಂಚಾಲಕರಾದ ಡಾ. ಪ್ರಸನ್ನ ಪಂಢರಿ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಐಕ್ಯೂಎಸಿ ಹಾಗೂ ಸಾಂಸ್ಕೃತಿಕ ವಿಭಾಗದ ಸಂಚಾಲಕರಾದ ಡಾ. ಸಂತೋಷ ಹುಬ್ಬಳ್ಳಿ ವಂದನಾರ್ಪಣೆ ಮಾಡಿದರು. ಪ್ರಾಧ್ಯಾಪಕ ಐ. ಬಿ. ಸಾತಿಹಾಳ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶ್ರೀ ಬಿ. ವಿ. ಏಣಗಿ, ಡಾ. ನಾಗರತ್ನ ಕುರಡೇಕರ್, ಶ್ರೀಮತಿ ಸವಿತಾ ಚಿಕ್ಕಣ್ಣವರ, ಶ್ರೀ ಗಣೇಶ್ ಧೋಂಗಡಿ, ಶ್ರೀ ಗಂಗಾಧರ್ ಗೌಡರ್, ಶ್ರೀಮತಿ ಚೈತ್ರ, ಶ್ರೀಮತಿ ಪ್ರತಿಭಾ, ಡಾ. ಗುಳುಗಂದಿ, ಡಾ. ಕುಡ್ಲಣ್ಣವರ, ಡಾ. ಜಾಲಗೇರಿ, ರೇಣುಕಾ ಬಾಜಿರಾಹುತ ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

